More

    ವಿಶ್ವಗುರುವಾಗಲು ಬೇಕು ಯುವ ಬಲ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ

    ದಾವಣಗೆರೆ: ಯುವಕರಲ್ಲಿ ಭಾರತೀಯತೆ, ಸಂಸ್ಕೃತಿ ಮತ್ತಷ್ಟು ಜಾಗೃತವಾದಲ್ಲಿ ಭಾರತ ವಿಶ್ವಗುರು ಆಗುವಲ್ಲಿ ಅನುಮಾನವಿಲ್ಲ. ತಾರುಣ್ಯ ಈ ದಿಕ್ಕಿನತ್ತ ಸಾಗಬೇಕಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ಯುವ ಬ್ರಿಗೇಡ್ ದಾವಣಗೆರೆ ಹಾಗೂ ಎ.ಕೆ.ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

    ನಮ್ಮ ಯುವಕರಲ್ಲಿ ಅಮೆರಿಕ, ಇಂಗ್ಲೆಂಡ್ ಆಹಾವನೆ ಆಗಲಿಲ್ಲ. ಏಕೆಂದರೆ ಅವರ ರಕ್ತದ ಕಣಕಣದಲ್ಲಿ ನಮ್ಮದೇ ಭಾರತ ಇದೆ. ಕಾಟಾಚಾರಕ್ಕಾಗಿ ಓದು, ಬರಹದಲ್ಲಿ ತೊಡಗದೆ ಅಮೂಲ್ಯ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇಶಕ್ಕಾಗಿ ಯುವಶಕ್ತಿ ಬಲಾಢ್ಯವಾಗಬೇಕು ಎಂದರು.
    ರಾಷ್ಟ್ರದ ಗೌರವವನ್ನು ಒಂದಿಂಚೂ ಕಳೆಯಲು ಬಿಡದಿರುವುದೇ ನಿಜವಾದ ದೇಶ ಸೇವೆ. ರಸ್ತೆಯಲ್ಲಿ ಬಿದ್ದ ಕೊಳಕು ವಸ್ತುವನ್ನು ಡಸ್ಟ್‌ಬಿನ್‌ಗೆ ಹಾಕುವುದು, ಹಸಿದವರಿಗೆ ತನ್ನಲ್ಲಿನ ತಿಂಡಿ ನೀಡುವುದು, ಬಸ್‌ಗೆ ಕಲ್ಲೆಸೆವವರನ್ನು ಮನವೊಲಿಸಿ, ಇದರಿಂದ ನಮಗೆ ನಷ್ಟವಾಗಲಿದೆ ಎಂಬುದನ್ನು ಮನವರಿಕೆ ಮಾಡಿದರೂ ಸಾಕು, ರಾಷ್ಟ್ರದ ಗೌರವ ಕಾಪಾಡಬಹುದು ಎಂದರು.
    ಇಂದಿನ ರಾಜಕಾರಣಿ, ಸ್ವಾಮೀಜಿಗಳಿಗೆ ಸಮಾವೇಶ ನಡೆಸಲು ಯುವಕರೇ ಬೇಕು. ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಎಲ್ಲದರಲ್ಲೂ ಶೇ.50ಕ್ಕಿಂತ ಹೆಚ್ಚು ಸಾಮರ್ಥ್ಯ ಹೊಂದಿರುವ ಯುವಶಕ್ತಿ, ದೇಶಕ್ಕಾಗಿ ಏನನ್ನಾದರೂ ಕೊಡಬೇಕೆಂಬ ತುಡಿತ ಇರಬೇಕು. ಮನಸ್ಸಿನ ನಿಯಂತ್ರಣ ಸಿದ್ಧಿಸಿಕೊಂಡು ಜೀವನದ ಸವಾಲುಗಳನ್ನು ಎದುರಿಸಲು ತಾರುಣ್ಯ ಸಿದ್ಧವಾಗಬೇಕು ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ರಾಮಕೃಷ್ಣ ಮಿಷನ್‌ನ ಅಧ್ಯಕ್ಷ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರು ಹೇಳಿದಂತೆ ಪುರುಷ ಸಿಂಹರಾದ ಯುವಜನರನ್ನು ಜಾಗೃತಗೊಳಿಸಬೇಕು. ಯುವಕರು ಉತ್ತಮ ಆಲೋಚನೆ ಜತೆಗೆ ಇತರರಿಗೆ ಉತ್ತಮವಾದುದನ್ನೇ ಮಾಡಬೇಕು. ಆಷಾಢಭೂತಿತನ, ನಾಟಕೀಯತೆ ಬಿಟ್ಟು ದೇಶಕ್ಕಾಗಿ ಸಶಕ್ತವಾಗಿ ಕೆಲಸ ಮಾಡಬೇಕು. ಮತ್ತೊಬ್ಬರನ್ನು ದೂಷಣೆ ಮಾಡದೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಆಶಿಸಿದರು.
    ಅಧ್ಯಕ್ಷತೆ ವಹಿಸಿದ್ದ ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಮಾತನಾಡಿದರು. ಸ್ವಾತಂತ್ರೃ ಹೋರಾಟಗಾರರಾದ ಎಚ್. ಮರುಳಸಿದ್ದಪ್ಪ ಹಾಗೂ ಬಿ. ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts