More

    ವಿಶ್ವಕರ್ಮ ಸಮಾಜ ಸಂಘದಿಂದ ಸಾಮೂಹಿಕ ವಿವಾಹ

    ದಾವಣಗೆರೆ: ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಕಾರ್ಯಕ್ರಮ, ನಗರದ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಮೇ 20ಕ್ಕೆ ನಡೆಯಲಿದೆ.
    30 ವಟುಗಳಿಗೆ ಉಪನಯನ ನಡೆಯಲಿದೆ. ಸಾಮೂಹಿಕ ವಿವಾಹಕ್ಕೆ ಇದುವರೆಗೆ ನಾಲ್ಕು ಜೋಡಿಗಳು ನೋಂದಣಿಯಾಗಿವೆ ಎಂದು ವಿಶ್ವಕರ್ಮ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಆನಗೋಡು ಅಂತರವಳ್ಳಿ ಶಾಖಾ ಮಠದ ಶ್ರೀ ಭಾಸ್ಕರ ಸ್ವಾಮೀಜಿ ಸಾನಿಧ್ಯದಲ್ಲಿ ಅಂದು ಬೆಳಗ್ಗೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ ನಾಗೇಂದ್ರಚಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮೇಯರ್ ವಿನಾಯಕ ಪೈಲ್ವಾನ್, ಜವಳಿ ವರ್ತಕ ಬಿ.ಸಿ.ಉಮಾಪತಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಆಗಮಿಸುವರು.
    ವಿಶ್ವಕರ್ಮಾ ಸಮಾಜದ ಗೌರವಾಧ್ಯಕ್ಷ ಬಿ.ಎಲ್.ಸೀತಾರಾಮಾಚಾರ್, ಎನ್. ಪೂರ್ವಾಚಾರ್, ವಿಶ್ವಕರ್ಮ ಕ್ರೆಡಿಟ್ ಸಹಕಾರ ಸಂಘದ ಅಧ್ತಕ್ಷ ಬಿ.ವಿ.ಶಿವಾನಂದ್, ಸಮಾಜಪೀಠದ ಆಡಳಿತಾಧಿಕಾರಿ ಜಿ.ಪಿ.ಜಗನ್ನಾಥ, ಪಾಲಿಕೆ ಸದಸ್ಯ ರಾಕೇಶ್ ಜಾಧವ್, ಕೆ.ಪಿ.ಪರಮೇಶ್ವರಪ್ಪ, ಎಚ್.ಒ.ವಿರುಪಾಕ್ಷಾಚಾರ್, ಅಖಂಡೇಶ್ವರ ಎಂ.ಪತ್ತಾರ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರಚಾರ್, ಬೇತೂರು ಮಂಜುನಾಥ ಆಚಾರ್, ಪೂರ್ವಾಚಾರ್, ಸಿದ್ದಾಚಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts