More

    ವಿವೇಕ ಜಾಗೃತ ಬಳಗದಿಂದ ಪ್ರಬಂಧ ಸ್ಪರ್ಧೆ

    ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರ 161ನೇ ಜಯಂತಿ ಅಂಗವಾಗಿ ವಿವೇಕ ಜಾಗೃತ ಬಳಗದ ವತಿಯಿಂದ ಅವಳಿ ನಗರದ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

    ಹೈಸ್ಕೂಲ್ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಬಾಲ್ಯ ಜೀವನದಿಂದ ಈಗಿನ ಮಕ್ಕಳು ಕಲಿಯಬೇಕಾದ ನೀತಿ ಪಾಠಗಳು, ಪದವಿಪೂರ್ವ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣ ಈಗಿನ ಜಗತ್ತಿಗೆ ಎಷ್ಟು ಉಪಯುಕ್ತ, ಪದವಿ ವಿದ್ಯಾರ್ಥಿಗಳು ನವಭಾರತ ನಿರ್ವಣಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳು ಕುರಿತು ಪ್ರಬಂಧ ಬರೆಯಬಹುದು.

    3,000 ಶಬ್ದಗಳಲ್ಲಿ ನುಡಿ ತಂತ್ರಾಂಶದ 14 ಫಾಂಟ್​ಗಳನ್ನು ಬಳಸಿ ಇ-ಮೇಲ್ :

    [email protected]

    ಮೂಲಕ ಜ. 15ರ ಒಳಗಾಗಿ ಪ್ರಬಂಧ ಕಳುಹಿಸಬೇಕು.

    ವಿದ್ಯಾರ್ಥಿ ಹೆಸರು, ಶಾಲೆ ಹೆಸರು, ವರ್ಗ, ಮನೆಯ ವಿಳಾಸ, ಪಿನ್​ಕೋಡ್, ಮೊಬೈಲ್ ನಂಬರ್​ನ್ನು ಲೇಖನದ ಮೊದಲ ಪುಟದಲ್ಲಿ ನಮೂದಿಸಬೇಕು ಮತ್ತು ಗುರುತಿನ ಪತ್ರ ಮತ್ತು ಆಧಾರ್ ಝುರಾಕ್ಸ ಪ್ರತಿ ಲಗತ್ತಿಸಬೇಕು.

    ಕೈಬರಹದ ಪ್ರಬಂಧಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವದಿಲ್ಲ. ಪ್ರತಿಯೊಂದು ಸ್ಪರ್ಧೆಗೆ ಪ್ರಥಮ 1,001 ರೂ., ದ್ವಿತೀಯ 751 ರೂ, ತೃತೀಯ 501 ರೂ. ಬಹುಮಾನ ನೀಡಲಾಗುವುದು.

    ಹೆಚ್ಚಿನ ವಿವರಗಳಿಗೆ ಬಳಗದ ಅಧ್ಯಕ್ಷೆ ವಿಜಯಾ ಪರಡ್ಡಿ, ಡಾ. ಬಿ.ಎಸ್. ಮಾಳವಾಡ (94483 54805)ಅವರನ್ನು ಸಂರ್ಪಸಲು ವಿವೇಕ ಜಾಗೃತ ಬಳಗದ ಡಾ. ಪಂಕಜಾ ಬ್ಯಾಕೋಡಿ ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts