More

    ವಿವೇಕಾನಂದರ ಆದರ್ಶ ಯುವಕರಿಗೆ ಮಾದರಿ – ಬಾಲಶೇಖರ ಬಂದಿ

    ಮೂಡಲಗಿ: ಸ್ವಾಮಿ ವಿವೇಕಾನಂದ ಅವರ ತತ್ತ್ವಾದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.
    ತಾಲೂಕಿನ ಸುಣಧೋಳಿ ಜಡಿಸಿದ್ದೇಶ್ವರ ಮಠದ ಸಭಾ ಮಂಟಪದಲ್ಲಿ ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ವಡೇರಟ್ಟಿ, ಎನ್‌ಎಸ್‌ಎಸ್ ಘಟಕ ಹಾಗೂ ಚೇತನ ಯುವಕ ಹಾಗೂ ಕ್ರೀಡಾ ಸಂಘ ಹೊಸಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ನಕ್ಷತ್ರಗಳಲ್ಲಿ ಸೂರ್ಯನಿದ್ದಂತೆ ಇಂತಹ ಮಹಾನ್ ಸನ್ಯಾಸಿಯ ಸ್ಮರಣೆ ದಿನನಿತ್ಯ ನಡೆಯಬೇಕು ಎಂದರು.

    ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಯುವಕರಲ್ಲಿ ಹುಮ್ಮಸ್ಸು, ತೇಜಸ್ಸು, ಭಾವಕ್ಯತೆ, ಜಾತ್ಯತೀತತೆ ಭಾವನೆ ಹೊಂದಿ ಸದೃಢ ರಾಷ್ಟ್ರ ಕಟ್ಟಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕ ಎಂ.ಜಿ.ದೇವಡಿ ವಹಿಸಿದ್ದರು. ಉಪನ್ಯಾಸಕರಾದ ಎಸ್.ಡಿ.ವಾಲಿ, ಸುಭಾಷ ಪತ್ತಾರ, ಕೆ.ಬಿ.ಬೆಳಗಲಿ, ಪರಸಪ್ಪ ಕುರಿ, ವಿಠ್ಠಲ ಕುಂಬಾರ, ಆನಂದ ಸುಳ್ಳನವರ, ಜಗದೀಶ ಡೊಳ್ಳಿ, ಎನ್.ಎಂ. ನಗಾರಿ, ವಿಠ್ಠಲ ಜೋಡಟ್ಟಿ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts