More

    ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆನೀರು

    ಚಿತ್ರದುರ್ಗ: ಹಿರಿಯೂರು ತಾಲೂಕು ವಿವಿ ಸಾಗರ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮು ಬೆಳೆಗಳಿಗಾಗಿ ಮಂಗಳವಾರ ಸಂಜೆಯಿಂದ ಮಾರ್ಚ್ 21ರವರೆಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿತು.
    ಬೇಸಿಗೆ ಸಂದರ್ಭದಲ್ಲಿ ಜಲಾಶಯದ ವ್ಯಾಪ್ತಿಯ 12315 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ 30 ದಿನ ಕಾಲ ನೀರು ಹರಿಯಲಿದ್ದು,ಹಿರಿ ಯೂರು ತಾಲೂಕಿನ 42 ಗ್ರಾಮಗಳಲ್ಲಿ ಅಂತರ್ಜಲವೃದ್ಧಿಯಾಗುವ ನಿರೀಕ್ಷೆ ಇದೆ.
    ಅಣೆಕಟ್ಟೆ ನಿರ್ಮಾಣವಾದ ಅಂದಿನಿಂದಲೂ ಬೇಸಿಗೆ ವೇಳೆ ಅಚ್ಚುಕಟ್ಟು ಪ್ರದೇಶಕ್ಕೆ ವಾಡಿಕೆಯಂತೆ ಈ ಬಾರಿಯೂ ಕೂಡ ಎರಡು ಬಾ ರಿ ನೀರು ಹರಿಸುವಂತೆ ಸಲಹಾ ಸಮಿತಿ ಸದಸ್ಯರು ಒತ್ತಾಯಿಸಿದರು. ಬರಗಾಲದಿಂದ ಈ ಬಾರಿ ಸಮಸ್ಯೆ ತೀವ್ರಗೊಂಡಿದ್ದು,ನೀರು ಹರಿಸ ದಿದ್ದರೆ ಬೆಳೆಗಳು ನಾಶವಾಗುತ್ತವೆ ಎಂದು ಆತಂಕ ವ್ಯಕ್ತ ಪಡಿಸಿದರು. ವಿಸ್ತೃತ ಚರ್ಚೆ ಬಳಿಕ ಸಚಿವರು 1.40 ಟಿಎಂಸಿ ನೀರು ಹರಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
    ಜಲಾಶಯದ ಸಂಗ್ರಹಣಾ ಸಾಮರ್ಥ್ಯ 30.42 ಟಿಎಂಸಿ. ಪ್ರಸ್ತುತ ಜಲಾಶಯದ ನೀರಿನಮಟ್ಟ 117.50 ಅಡಿ ಇದ್ದು,18.59 ಟಿ ಎಂಸಿ ಇದೆ. ಹಿರಿಯೂರು,ಚಿತ್ರದುರ್ಗ,ಚಳ್ಳಕೆರೆ ನಗರಗಳು,ಸಂಶೋಧನಾ ಕೇಂದ್ರಗಳು ಹಾಗೂ 18ಹಳ್ಳಿಗಳಿಗೆ ನಿತ್ಯ 40 ಎಂಎಲ್‌ಡಿ ಕುಡಿವ ನೀರಿಗಾಗಿ ಪೂರೈಸಬೇಕಿದೆ.
    ಇದಕ್ಕಾಗಿ 0.2115 ಟಿಎಂಸಿ ಅಗತ್ಯವಿದ್ದು,ಮೇ ಅಂತ್ಯದೊಳಗೆ ಅಂದಾಜು 0.354 ಟಿಎಂಸಿ ನೀರು ಆವಿಯಾಗಲಿದೆ. ಈ ಅವಧಿಯ ಲ್ಲಿ ಜಲಾಶಯದಲ್ಲಿ ಬಳಕೆಗೆ ಸಿಗುವ ನೀರು 16.625 ಟಿಎಂಸಿ ಹಾಗೂ ನೀರಿನ ಮಟ್ಟ 114.40 ಅಡಿಗೆ ತಲುಪಲಿದೆ ಎಂದು ಅಧಿಕಾರಿ ಗಳು ಸಭೆಗೆ ಮಾಹಿತಿ ನೀಡಿದರು.
    ಬೇಸಿಗೆ ಹಂಗಾಮಿನಲ್ಲಿ ಶೇಂಗಾ,ಸೂರ‌್ಯಕಾಂತಿ,ಮೆಕ್ಕೆಜೋಳ,ರಾಗಿ ಮತ್ತಿತರ ಬೆಳೆಗಳ ಬಿತ್ತನೆಯಾಗಿದೆ. ತೋಟದ ಬೆಳೆಗಳಾದ ತೆ ಂಗು, ಅಡಕೆ,ಬಾಳೆ ಇತ್ಯಾದಿಗಳಿಗೆ ನೀರಿನ ಅಗತ್ಯವಿದ್ದು, ಈ ಸಭೆಯಲ್ಲೇ ತಲಾ ನಲ್ವತ್ತು ದಿನಗಳಂತೆ ಎರಡು ಬಾರಿ ನೀರು ಹರಿಸಲು ತೀ ರ್ಮಾ ನಿಸಬೇಕೆಂದು ಪ್ರತಿಪಾದಿಸಿದರು.
    ಸದಸ್ಯರ ಸಲಹೆ ಹಾಗೂ ಅಧಿಕಾರಿಗಳ ಮಾಹಿತಿ,ಸಚಿವರು,ಶಾಸಕರ ನಿರ್ದೇಶನದ ಬಳಿಕ ಸದ್ಯಕ್ಕೆ 30 ದಿನಗಳ ಕಾಲ ನೀರು ಹರಿಸಲಾ ಗುವುದೆಂದು ಡಿಸಿ ಟಿ.ವೆಂಕಟೇಶ್ ಪ್ರಕಟಿಸಿದರು. ನೀರು ಎಲ್ಲೂ ಪೋಲಾಗದಂತೆ ಸಂಬಂಧಿದ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಿದರು.
    ಶಾಸಕರಾದ ಟಿ.ರಘುಮೂರ್ತಿ,ಶಾಸಕ ಬಿ.ಜಿ.ಗೋವಿಂದಪ್ಪ,ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಸಲಹಾ ಸಮಿತಿ ಸದಸ್ಯರಾದ ಪಿ.ಕೆ.ಸುಂದರೇಶ್,ಸಿ.ಎನ್.ಸುಂದರಂ,ಆಸಿಫ್‌ಅಲಿ,ಎನ್.ಅನಿಲ್‌ಕುಮಾರ್,ವೈ.ನಾಗರಾಜು,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್,ವಿಶ್ವೇಶ್ವರಯ್ಯ ಜಲ ನಿಗಮದ ಸಿಇ ಕೆ.ಎಂ.ಶಿವಪ್ರಕಾಶ್,ಇಇ ಬಾರಿಕರ ಚಂದ್ರಪ್ಪ, ಎಇಇ ವಿ.ಎಂ.ವಿಜಯಕುಮಾರ್, ತೋಟಗಾ ರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಲೋಕೇಶ್,ಸಹಾಯಕ ಕೃಷಿ ಅಧಿಕಾರಿ ಕಿರಣ್ ಮತ್ತಿತರ ಅಧಿಕಾರಿಗಳಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts