More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ


    ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನರ್ಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.
    ಸಂಘದ ರಾಷ್ಟ್ರೀಯ ಪ್ರಮುಖ ಬಿ.ವೆಂಕಟ್ ಮಾತನಾಡಿ, ರಾಜ್ಯದ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕೆಲಸಗಾರರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ, ಭವಿಷ್ಯ ನಿಧಿ, ಇಎಸ್ಐ, ನಿವೃತ್ತಿ ವೇತನ ಮೊದಲಾದ ಸೌಲಭ್ಯಗಳನ್ನು ಖಾತರಿಪಡಿಸುವ ಶಾಸನ ರೂಪಿಸಬೇಕು. ಕೇರಳದಂತೆ ಕೂಲಿಕಾರರಿಗೆ ಬ್ಯಾಂಕ್ ಮೂಲಕ ಸಬ್ಸಿಡಿಸಹಿತ ಸಾಲ, ಖುಣಮುಕ್ತ ಕಾಯ್ದೆ, ಸಮಗ್ರ ಪಡಿತರ ಪದ್ಧತಿ, 60 ವರ್ಷ ವಯಸ್ಸಾಗಿರುವವರಿಗೆ 5 ಸಾವಿರ ರೂ. ಮಾಸಿಕ ನಿವೃತ್ತಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

    ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ಬೀದಿಬದಿ, ಹಮಾಲಿ, ತೋಟ, ಕಟ್ಟಡ ನಿಮರ್ಾಣ ಕಾಮರ್ಿಕರು ಸೇರಿ ಅಸಂಘಟಿತರಿಗೆ ಇರುವಂತೆ ಕೃಷಿ ಕೂಲಿಕಾರರಿಗಾಗಿಯೂ ಕಲ್ಯಾಣ ನಿಧಿ ಸ್ಥಾಪಿಸಲು ಬಜೆಟ್ನಲ್ಲಿ ಪ್ರಕಟಿಸಬೇಕು. ರಾಜ್ಯ ಮತ್ತು ಕೇಂದ್ರ ಸಕರ್ಾರ ಕಾಮರ್ಿಕರ ಪರ ಕೆಲಸ ಮಾಡಿ ಹಿತ ಕಾಪಾಡಬೇಕು ಎಂದರು.

    ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್ ಮಾತನಾಡಿ, ಎಲ್ಲ ವಸತಿರಹಿತ ಕೂಲಿಕಾರರಿಗೆ ಮನೆ ಕಟ್ಟಿಸಿಕೊಳ್ಳಲು ಉಚಿತ ನಿವೇಶನ ನೀಡಬೇಕು. ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಜೆಟ್ನಲ್ಲಿ ಗರಿಷ್ಠ ಮೊತ್ತ ಮೀಸಲಿಡಬೇಕು. ಮನೆ ಕಟ್ಟಿಸಿಕೊಳ್ಳಲು ತಲಾ 10 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts