More

    ವಿವಿಧ ಬೇಡಿಕೆಗೆ ಆಗ್ರಹಿಸಿ, ಕೆವಿಜಿಬಿ ಬ್ಯಾಂಕ್ ಮುಷ್ಕರ

    ವಿಜಯಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 28, 29ರಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ಸ್ ಅಸೋಶಿಯೇಷನ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಆಫೀಸರ್ಸ್ ಅಸೋಶಿಯೇಷನ್ ವತಿಯಿಂದ ಬ್ಯಾಂಕ್ ನೌಕರರು ಎರಡು ದಿನಗಳ ಕಾಲ ವಿಜಯಪುರದಲ್ಲಿ ಮುಷ್ಕರ ನಡೆಸಿದ್ರು. ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ರಚನೆ ಆಗಲೇ ಬೇಕು. 2010 ರ ನಂತರದಲ್ಲಿ ಸೇವೆಗೆ ಸೇರಿದ ಸಿಬ್ಬಂದಿಗೂ ಹಿಂದಿನ ಸುತ್ತೊಲೆ ಪ್ರಕಾರ ನಿವೃತ್ತಿ ವೇತನ ಜಾರಿಯಾಗಲಿ. ಹನ್ನೊಂದನೇ ವೇತನ ಪರಿಷ್ಕರಣೆ ಸಂಪೂರ್ಣ ಜಾರಿಗೆ ಬರಲಿ. ಬಡ್ತಿ ಮತ್ತು ಸೇವಾ ನಿಯಮಗಳು ತಿದ್ದುಪಡಿ ಆಗಲೇ ಬೇಕು. ಕಂಪ್ಯೂಟರ್ ಇಂಕ್ರಿಮೆಂಟ್ ಜಾರಿಗೆ ಬರಲಿ. ಅನುಕಂಪದ ನೇಮಕಾತಿ ಹಿಂದಿನಿಂದಲೂ ಜಾರಿಗೆ ಬರಲಿ. ಹೊರಗುತ್ತಿಗೆ ಪದ್ಧತಿ ರದ್ದಾಗಲಿ. ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು. ಸರ್ಕಾರಿ ಸೌಮದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಿ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗೆ ದಿಕ್ಕಾರ. ಕೇಂದ್ರ ಸರ್ಕಾರದ ಹಣಕಾಸು ನೀತಿಗೆ ಹೇಳಿ ದಿಕ್ಕಾರ. ಪ್ರವರ್ತಕ ಬ್ಯಾಂಕ್ ನ ಮಲತಾಯಿ ಧೋರಣೆಗೆ ದಿಕ್ಕಾರ. ನಾಬಾರ್ಡ್ ನ ಮಲತಾಯಿ ಧೋರಣೆಗೆ ದಿಕ್ಕಾರ. ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮುಷ್ಕರ ಯಶಸ್ವಿ ಯಾಗಲಿ ಎಂದು ಮುಂತಾದ ಬೇಡಿಕೆಗಳೊಂದಿಗೆ AIRRBEA, AKGBEF, KVGBEA, KVGBOA ಮುಷ್ಕರ ನಡೆಸಿದ್ರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಪ್ಲಾಯ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ರಾಜು ಬಜಂತ್ರಿ ಹಾಗೂ ಜಾಯಿಂಟ್ ಸೆಕ್ರೆಟರಿ ವಿಶ್ವನಾಥ್ ರಡ್ಡಿ ಹಾಗೂ ವಿಜಾಪುರ ಜಿಲ್ಲಾ ಸಮೀತಿ ಸದಸ್ಯರಾದ ಎ ಎಂ ಮುಲ್ಲಾ, ಈಶ್ವರ್ ಬಾಲರೆಡ್ಡಿ, ವಿಜಯ್ ನಯ್ಕೊಡಿ, ಸಂಗ್ರಾಜ ನಡುವಿನಮನಿ, ಲಕ್ಷ್ಮಣ ಅಂಬಿಗೇರ, ರಾಕೇಶ್ ಖೇಡ್, ಲಕ್ಷ್ಮೀಕಾಂತ್ ಅಂಬಲಿ, ಕೆ ಎ ಹುಂಡೇಕಾರ್, ಶಿವಕುಮಾರ್ ಉಮದಿ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts