More

    ವಿವಿಧ ಧಾರ್ವಿುಕ ಮುಖಂಡರ ಮನೆಗಳಿಗೆ ಭೇಟಿ

    ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ- 2019ರ ಕುರಿತು ಜನಜಾಗೃತಿ ಅಭಿಯಾನದ ಅಂಗವಾಗಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ನಗರದ ವಿವಿಧ ಧರ್ಮಗಳ ಮುಖಂಡರ ಮನೆಗಳಿಗೆ ಭಾನುವಾರ ತೆರಳಿ ಮಾಹಿತಿ ನೀಡಿದರು.

    ನಗರದ ಸಾರಸ್ವತಪುರದ ಹಿರಿಯ ವಕೀಲ ಹಾಗೂ ರೆಡ್ಡಿ ಸಮಾಜ ಮುಖಂಡ ಕೆ.ಎಲ್. ಪಾಟೀಲರ ಮನೆಗೆ ತೆರಳಿದ ಸಚಿವ ಜೋಶಿ, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸ್ಪಷ್ಟನೆಗಳುಳ್ಳ ಕರಪತ್ರ ನೀಡಿದರು. ಕಾಯ್ದೆಯ ಬಗ್ಗೆ ವಿವರಿಸಿದ ಅವರು, ಪೌರತ್ವ ತಿದ್ದುಪಡಿಯ ಬಗ್ಗೆ 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿನ ಮುಸ್ಲಿಮರು ಆಯಾ ದೇಶಗಳಲ್ಲಿ ಅಲ್ಪಸಂಖ್ಯಾತರಾಗಲು ಸಾಧ್ಯವಿಲ್ಲ. ಕಾರಣ ಇಸ್ಲಾಂ ಧರ್ಮ ಅವರ ರಾಷ್ಟ್ರೀಯ ಧರ್ಮವಾಗಿದೆ. ನಿರಾಶ್ರಿತರು ಮತ್ತು ನುಸುಳುಕೋರರ ನಡುವೆ ವ್ಯತ್ಯಾಸವಿದೆ. ಕಾಯ್ದೆ ಜಾರಿಯಿಂದ ಭಾರತದ ಮುಸ್ಲಿಂ ಧರ್ಮದವರಿಗೆ ಯಾವುದೇ ಹಾನಿ ಇಲ್ಲ. ಪೌರತ್ವ ಕಾಯ್ದೆ ಯಾರ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ. ಬಿಜೆಪಿಯಿಂದ ದೇಶದ 3 ಕೋಟಿ ಕುಟುಂಬಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಲಾಗಿದೆ ಎಂದರು.

    ಇದೇವೇಳೆ ವಕೀಲ ಕೆ.ಎಲ್. ಪಾಟೀಲ ಅವರು ಸಚಿವ ಜೋಶಿ ಅವರನ್ನು ಸನ್ಮಾನಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಸಂಜಯ ಕಪಟಕರ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಹಿರಿಯ ವಕೀಲರಾದ ಕೆ.ಬಿ. ನಾವಲಗಿಮಠ, ವಿ.ಡಿ. ಕಾಮರೆಡ್ಡಿ, ಇತರರಿದ್ದರು.

    ನಂತರ ಸಚಿವರು ಕ್ರೖೆಸ್ತ ಧರ್ಮದ ಮುಖಂಡರಾದ ಪ್ರೊ. ಕ್ರಿಸ್ಟೋಫರ್, ಮಾರ್ಟಿನ್ ಬೋರ್ಗೆ, ಮುಸ್ಲಿಂ ಸಮಾಜದ ಮುಖಂಡ ಆರ್.ಎಂ. ದರಗಾದ ಅವರ ಮನೆಗಳಿಗೆ ತೆರಳಿ ಪೌರತ್ವ ಕಾಯ್ದೆಯ ಬಗ್ಗೆ ಕರಪತ್ರ ವಿತರಿಸಿ ಜನಜಾಗೃತಿ ಮೂಡಿಸುವಂತೆ ವಿನಂತಿಸಿದರು.

    ಸಿ.ಎಂ. ಇಬ್ರಾಹಿಂ ಕಾಂಗ್ರೆಸ್​ನ ವಿದೂಷಕ

    ಧಾರವಾಡ: ಸಿ.ಎಂ. ಇಬ್ರಾಹಿಂ ಕಾಂಗ್ರೆಸ್​ನ ವಿದೂಷಕ. ಅವರು ಸರ್ಕಸ್​ನಲ್ಲಿ ಇರುವ ಜೋಕರ್ ರೀತಿ ವರ್ತಿಸುತ್ತಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು. ಕಾಂಗ್ರೆಸ್​ನಲ್ಲಿ ಏನಾದರೂ ಸಿಗುತ್ತದೆ ಎಂದು ಇಬ್ರಾಹಿಂ ವಿದೂಷಕನಂತೆ ಮಾತನಾಡುತ್ತಾರೆ. ಸರ್ಕಸ್​ನಲ್ಲಿ ಜೋಕರ್ ಏನಾದರೂ ಮಾಡಿದಾಗ ಎಂಜಾಯ್ ಮಾಡಿದಂತೆ ಮಾಡಬೇಕು ಎಂದರು.

    ಸಚಿವ ಜಗದೀಶ ಶೆಟ್ಟರ್ ಅವರು ರಾಜ್ಯಪಾಲ ಹಾಗೂ ತಾವು ಮುಖ್ಯಮಂತ್ರಿ ಆಗುವ ಸುದ್ದಿ ಕೇವಲ ವದಂತಿ. ಇದು ಪ್ರತಿಕ್ರಿಯೆ ಕೊಡುವುದಕ್ಕೂ ಅರ್ಹವಲ್ಲದ ವದಂತಿ. ಏಕೆಂದರೆ, ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ನಂತರ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ. ಕೊಪ್ಪಳದಲ್ಲಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಕೊಡುವ ಬಗ್ಗೆ ಸಂಸದ ಸಂಗಣ್ಣ ಕರಡಿ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಗೆ ಪೌರತ್ವ ಸಿಕ್ಕೇ ಸಿಗುತ್ತದೆ ಎಂದರು.

    ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸುವವರನ್ನು ಗುಂಡಿಕ್ಕಿದರೆ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿ, ಅವರು ಆ ರೀತಿ ಹೇಳಬಾರದಿತ್ತು. ಅವರಿಗೆ ಪಕ್ಷದಿಂದ ತಿಳಿಹೇಳಲಾಗುವುದು. ಕಾಂಗ್ರೆಸ್ ದ್ವೇಷ ಬಿತ್ತಿ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಕಾಂಗ್ರೆಸ್ ಮೂಡಿಸಿದ ಗೊಂದಲವನ್ನು ನಿವಾರಿಸಲು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

    ಧರ್ಮದ ಆಧಾರದ ಮೇಲೆ ಸಿಎಎ ಬೇಡ

    ಹುಬ್ಬಳ್ಳಿ: ಧರ್ಮದ ಆಧಾರದ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದು ತರವಲ್ಲ. ಎಲ್ಲ ಧರ್ಮದವರಿಗೂ ಇದು ಕೇಡು ತರಲಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಅಹ್ಮದ್ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರೀ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶವನ್ನಷ್ಟೇ ಏಕೆ ಪರಿಗಣಿಸಲಾಗಿದೆ. ಶ್ರೀಲಂಕಾ, ಭೂತಾನ್ ಸೇರಿ ಇತರೆ ರಾಷ್ಟ್ರಗಳಲ್ಲಿರುವವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

    ನಾವು ಪಾಕಿಸ್ತಾನದ ಪರ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಬೇಕಾದರೆ ಪಾಕಿಸ್ತಾನವನ್ನು ಒಮ್ಮೆಲೆ ಧ್ವಂಸ ಮಾಡಲಿ. ಅದು ಹೇಗಿದ್ದರೂ ಶತೃ ರಾಷ್ಟ್ರ ಎಂದರು.

    ಜ. 6ರಂದು ಹುಬ್ಬಳ್ಳಿಯಲ್ಲಿ ಅಲ್ಪಸಂಖ್ಯಾತರ ಘಟಕದ ಸಭೆ ಕರೆಯಲಾಗಿದೆ. ಅಲ್ಲಿ ರ್ಚಚಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.

    ಪ್ರಮುಖರಾದ ಮೆಹಬೂಬ ಪಾಷಾ, ಸಾಬೀರ್ ಅಲಿ, ಇರ್ಷಾದ್ ಅಹ್ಮದ್, ಫಾರೂಕ್ ಪಾಷಾ, ಶಾರುಕ್ ಮುಲ್ಲಾ, ಇಕ್ಬಾಲ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts