More

    ವಿವಿಧ ಉದ್ದಿಮೆ ಸ್ಥಾಪನೆಗೆ ಮುಂದಾಗಿ

    ಹುಬ್ಬಳ್ಳಿ: ಐಎಎಸ್ ಶ್ರೇಣಿಗೆ ಪದೋನ್ನತಿ ಪಡೆದ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ಬೆಂಗಳೂರು ಕಾಸ್​ಕಾರ್ಡ್ ಬ್ಯಾಂಕಿಗೆ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ಉಳವಪ್ಪ ದಾಸನೂರ ಅವರನ್ನು ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ ಇಟ್ನಾಳ, ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಬೇರೆ-ಬೇರೆ ಭಾಗಗಳಿಂದ ಬೃಹತ್ ಕೈಗಾರಿಕೋದ್ಯಮಿಗಳು ಬರುವ ನಿರೀಕ್ಷೆ ಇದ್ದು, ಈ ಭಾಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸಿಗಲಿವೆ. ಎಪಿಎಂಸಿ ವರ್ತಕರು ರೈತರ ಉತ್ಪನ್ನಗಳ ಮಾರಾಟದ ಜತೆಗೆ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದರು.

    ಎಪಿಎಂಸಿಯ ಎಲ್ಲ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿ ಹೆಸರು ನೋಂದಣಿ ಮಾಡಲಾಗುವುದು ಭರವಸೆ ನೀಡಿದರು. ಉಳವಪ್ಪ ದಾಸನೂರ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ರೈತರಿಗೆ ಸುಲಭವಾಗಿ ಸಾಲ, ಸೌಲಭ್ಯ ದೊರೆಯುವಂತೆ ಮಾಡಿ ಕೃಷಿಕ ಸಮಾಜ ಹಾಗೂ ಮಾರುಕಟ್ಟೆ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.

    ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ, ಸದಸ್ಯ ಚನ್ನು ಹೊಸಮನಿ, ಸಂಘದ ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಮೋಹನ ಸೋಳಂಕಿ, ಮಾಜಿ ಅಧ್ಯಕ್ಷರಾದ ರಾಜಣ್ಣ ಬತ್ಲಿ, ರಮೇಶ ಕುರವಾ, ಪ್ರಕಾಶ ಕುರಟ್ಟಿ, ಶಿವಯೋಗಿ ಪೂಜಾರ, ಶೇಖಣ್ಣ ಕಡಗದ, ಬಸವರಾಜ ಅಂಗಡಿ, ನಾಗಪ್ಪ ಅಲ್ಲಣ್ಣವರ, ಬಸವರಾಜ ಬೆಲ್ಲದ, ಶಿವಾನಂದ ಸಣ್ಣಕ್ಕಿ, ಕರಿಯಪ್ಪ ದಳವಾಯಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ರಾಜಶೇಖರ ವಾಲಿ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ ಪರಿಚಯಿಸಿದರು. ಡಾ. ರಾಮು ಮೂಲಗಿ ಪ್ರಾರ್ಥನೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts