More

    ವಿರೋಧಿಗಳ ಸಂಚಿಗೆ ಬಲಿಯಾಗದಿರಿ

    ಅರಸೀಕೆರೆ: ಗೂಂಡಾ ಪ್ರವೃತ್ತಿ ರಾಜಕಾರಣಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಗುಡುಗಿದರು.

    ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಬೆಂಬಲಿಗರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಲು ಪ್ರಚೋದನೆ ನೀಡುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕಣಕಟ್ಟೆ ಹೋಬಳಿ ಸೊಪ್ಪಿನಹಳ್ಳಿ, ಗುತ್ತಿನಕೆರೆ ಗ್ರಾಮದಲ್ಲಿ ಕೆಲ ಕಾಂಗ್ರೆಸ್ ಪುಂಡರ ಗುಂಪು ನಾವು ಪ್ರಚಾರ ನಡೆಸುತ್ತಿದ್ದ ವೇಳೆ ಪಟಾಕಿ ಹಚ್ಚಿ ಹೆಣ್ಣುಮಕ್ಕಳನ್ನು ಬೆದರಿಸುವ ತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

    ಬೆಳಗುಂಬ ಗ್ರಾಪಂ ವ್ಯಾಪ್ತಿಯ ಒಂಟೆಕಲ್ಲಟ್ಟಿ ಗ್ರಾಮದಲ್ಲಿ ಕಾರು ಅಡ್ಡಗಟ್ಟಿ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸುವ ಕುತಂತ್ರ ನಡೆಸಿರು ವುದು ಅಕ್ಷಮ್ಯ ಎಂದು ವಾಗ್ದಾಳಿ ನಡೆಸಿದರು.

    ಗ್ರಾಮದಲ್ಲಿ ದಶಕಗಳ ಕಾಲದಿಂದ ಸ್ಥಗಿತಗೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರು ಆರಂಭಕ್ಕೆ ಅವಕಾಶ ಮಾಡಿಕೊ ಟ್ಟಿದ್ದೇನೆ. ಮಾಜಿ ಸಚಿವರು ಹಾಲು ಉತ್ಪಾದಕರ ಸಂಘ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ಪ್ರಗತಿಗೆ ಕೈಜೋಡಸಲಾಗಿದೆ. ರಾಜಕೀಯ ವಿರೋಧಿಗಳು ನಡೆಸುವ ಸಂಚಿಗೆ ಬಲಿಯಾಗದೆ ಮೇ.10ರಂದು ಜೆಡಿಎಸ್ ಪರ ಮತಹಾಕುವ ಮೂಲಕ ಶಕ್ತಿ ಏನೆಂಬುದನ್ನು ಎಲ್ಲರೂ ಸಾಬೀತುಪಡಿಸಬೇಕಿದೆ ಎಂದು ಕರೆ ನೀಡಿದರು.

    ಮನವಿ: ಮಾಜಿ ಶಾಸಕರ ಬೆಂಬಲಿಗರು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಮದಲ್ಲಿ ಹೆಚ್ಚುವರಿ ತುಕಡಿ ನಿಯೋಜಿಸವ ಮೂಲಕ ಜನರ ರಕ್ಷಣಗೆ ಮುಂದಾಗಬೇಕು ಎಂದು ಎನ್.ಆರ್.ಸಂತೋಷ್ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

    ದೌಡು: ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡರು ಅಡ್ಡಿಪಡಿಸಿದ್ದಾರೆ ಎನ್ನುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅರಸೀಕೆರೆ ನಗರ ಸೇರಿ ಸೂಳೇಕೆರೆ, ತಿಪ್ಪನಹಳ್ಳಿ, ತಿಮ್ಲಾಪುರ, ಅಜ್ಜನಹಳ್ಳಿ, ಚೆಲ್ಲಾಪುರ, ಅಗ್ಗುಂದ, ದುಮ್ಮೇನಹಳ್ಳಿ, ಕಾಳೇನಹಳ್ಳಿ, ತೊಳತೊರೆ, ಹಬ್ಬನಘಟ್ಟ, ಗೊಲ್ಲರಹಳ್ಳಿ, ಪನ್ನಸಮುದ್ರ, ಆದಿಹಳ್ಳಿ, ಅಜ್ಜನಹಳ್ಳಿ ಯಾದವರಹಟ್ಟಿ, ನಾಗೇನಹಳ್ಳಿ ಸುತ್ತಮುತ್ತಲ ಗ್ರಾಮಗಳ ನೂರಾರು ಯುವಕರು ದ್ವಿಚಕ್ರ ವಾಹನಗಳಲ್ಲಿ ಬೆಳಗುಂಬ ಗ್ರಾಮಕ್ಕೆ ದೌಡಾಯಿಸಿದರು. ಅಲ್ಲದೆ ಸಂತೋಷ್ ಹೋರಾಟ ತಡೆಯುವ ಪ್ರಯತ್ನ ನಡೆಸಿದರೆ ತಕ್ಕಬೆಲೆ ತೆರಬೇಕಾಗುತ್ತದೆ ಎಂದು ಹರಿಹಾಯ್ದರು.

    ಪರಿಸ್ಥಿತಿ ಗಂಭೀರತೆ ಅರಿತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಸಹಕಾರ ಮಹಾಮಂಡಳ ಅಧ್ಯಕ್ಷ ಬಾಚೇನಹಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಹುಲ್ಲೇಕೆರೆ ಕುಮಾರ್,ಬೆಳಗುಂಬಚಂದು,ರಘುನಂದನ್, ಉಮೇಶ್, ಮಧು, ರೈತ ಸಂಘದ ಮಂಜುಳಾ ಸೇರಿ ಹಲವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts