More

    ವಿಮಾನ ಸಂಚಾರಕ್ಕೆ ಗಗನ್ ಜಿಪಿಎಸ್; ಸ್ವದೇಶಿ ತಂತ್ರಜ್ಞಾನ ಪ್ರಯೋಗ ಯಶಸ್ವಿ

    ಸ್ವದೇಶಿ ನಿರ್ವಿುತ ದಿಕ್ಸೂಚಿ ವ್ಯವಸ್ಥೆ ‘ಗಗನ್’ಅನ್ನು ವಿಮಾನಯಾನಕ್ಕೆ ಇದೇ ಮೊದಲ ಬಾರಿ ಗುರುವಾರ ಬಳಸಲಾಗಿದೆ. ಇಂಡಿಗೋ ಏರ್​ಲೈನ್ ಇದನ್ನು ಬಳಸಿ ವಿಮಾನಯಾನ ಕ್ಷೇತ್ರದ ಇತಿಹಾಸ ನಿರ್ಮಾಣ ಮಾಡಿದೆ. ಸ್ಯಾಟಲೈಟ್ ಆಧಾರಿತ ಲ್ಯಾಂಡಿಂಗ್ ಪೊ›ಸೀಜರ್ ಅನುಷ್ಠಾನಗೊಳಿಸಲಾಗಿದೆ. ಏಷ್ಯಾ ಫೆಸಿಫಿಕ್ ಪ್ರಾಂತ್ಯದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ದೇಶ ಭಾರತ.

    ಇಸ್ರೋ ತಂತ್ರಜ್ಞಾನ: ಇಸ್ರೋದ ಮೂರು ಉಪಗ್ರಹಗಳು 3ಡಿ ನ್ಯಾವಿಗೇಷನ್ ಗೈಡೆನ್ಸ್​ನ್ನು ಪೈಲಟ್​ಗಳಿಗೆ ಒದಗಿಸಿದ್ದು, ಅವರು ಅಜ್ಮೇರ್ ಏರ್​ಪೋರ್ಟ್​ನ ರನ್​ವೇನಲ್ಲಿ ಪ್ರಾಯೋಗಿಕವಾಗಿ ವಿಮಾನವನ್ನು ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು ಎಂದು ಏರ್​ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಹೇಳಿದೆ. ಭಾರತದ ನಾಗರಿಕ ವಿಮಾನಯಾನ ಇತಿಹಾಸದ ಏರ್ ನ್ಯಾವಿಗೇಷನ್ ಸೇವೆಗಳ ಪೈಕಿ ಈ ಪ್ರಯೋಗ ಯಶಸ್ವಿಯಾಗಿದ್ದು, ಹೊಸ ಮೈಲಿಗಲ್ಲಾಗಿದೆ. ಪ್ರಸ್ತುತ ಏರ್ ನ್ಯಾವಿಗೇಷನ್ ಸೇವೆಗಳನ್ನು ಗ್ರೌಂಡ್ ಬೇಸ್ಡ್ ಸಿಸ್ಟಮ್ ಮೂಲಕ ಒದಗಿಸಲಾಗುತ್ತಿದೆ.

    ಗಗನ್ ಸೇವೆ ಹೀಗಿದೆ…: ಜಿಪಿಎಸ್ ಏಯ್ಡೆಡ್ ಜಿಯೋ ಆಗುಮೆಂಟೆಡ್ ನ್ಯಾವಿಗೇಷನ್ ಎಂಬುದು ಉಪಗ್ರಹ ಆಧಾರಿತ ನ್ಯಾವಿಗೇಶನ್ ಸಿಸ್ಟಮ್ ಆಗಿದೆ. ಗ್ರೌಂಡ್ ಬೇಸ್ಡ್ ಲ್ಯಾಂಡಿಂಗ್ ಸಿಸ್ಟಮ್ಷ್ಟೇ ನಿಖರತೆಯನ್ನು ಒದಗಿಸುತ್ತದೆ. ಪೈಲಟ್​ಗಳಿಗೆ ವಿಮಾನ ಲ್ಯಾಂಡ್ ಮಾಡಲು 550 ಮೀಟರ್ ಮತ್ತು ಇನ್ನೂ ಹೆಚ್ಚಿನ ದೂರದ ಸ್ಪಷ್ಟತೆಯನ್ನು ನೀಡುತ್ತದೆ. ಗ್ರೌಂಡ್ ಬೇಸ್ಡ್ ಸಿಸ್ಟಮ್ ಸಿಎಟಿ-1 ಐಎಲ್​ಎಸ್ 200 ಅಡಿ ಎತ್ತರದ ಡಿಸಿಷನ್ ಹೈಟ್ ಹೊಂದಿದ್ದರೆ, ಗಗನ್ ಆಧಾರಿತ ಸೇವೆ 250 ಅಡಿ ಎತ್ತರದ ಡಿಸಿಷನ್ ಹೈಟ್ ಹೊಂದಿದೆ. ಗಗನ್ ಉಪಗ್ರಹ ಸೇವೆ ಪಡೆದ ಇಂಡಿಗೋ ಪೈಲಟ್​ಗಳು ಲೋಕಲೈಸರ್ ಪರ್ಫಾಮೆನ್ಸ್ ವಿತ್ ವರ್ಟಿಕಲ್ ಗೈಡೆನ್ಸ್ (ಎಲ್​ಪಿವಿ) ಅಪೋ›ಚ್ ಅನ್ನು ಗುರುವಾರ ಲ್ಯಾಂಡಿಂಗ್​ಗೆ ಬಳಸಿದ್ದರು.

    ಉಪಕರಣ ಅಳವಡಿಕೆ: ಭಾರತದಲ್ಲಿ ನೋಂದಾಯಿತ ಎಲ್ಲ ವಿಮಾನಗಳಲ್ಲಿ ಗಗನ್ ಉಪಕರಣ ಅಳವಡಿಸುವುದನ್ನು 2021ರ ಜುಲೈ 1ರಿಂದ ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ, ಗೋ ಫಸ್ಟ್, ಏರ್ ಏಷ್ಯಾಗಳ 76 ವಿಮಾನಗಳಲ್ಲಿ ಈ ಉಪಕರಣ ಅಳವಡಿಕೆಯಾಗಿದೆ. ಇವುಗಳಿಗೆ ಎಲ್​ಪಿವಿ ಪೊ›ಸೀಜರ್ ಅನುಸರಿಸಲು ಸಾಧ್ಯವಾಗುತ್ತಿದೆ.

    ಇತರ ವ್ಯವಸ್ಥೆ: ಭಾರತದ ಗಗನ್ ವ್ಯವಸ್ಥೆಗೆ ಹೊರತಾಗಿ ಜಗತ್ತಿನಲ್ಲಿ ಬಾಹ್ಯಾಕಾಶ ಆಧಾರಿತ ಮೂರು ಆಗ್ಯುಮೆಂಟೇಶನ್ ಸಿಸ್ಟಮ್ ಇವೆ. ಅಮೆರಿಕದ (ಡಬ್ಲು್ಯಎಎಎಸ್), ಯುರೋಪ್​ನ (ಇಜಿಎನ್​ಒಎಸ್) ಮತ್ತು ಜಪಾನ್​ನ (ಎಂಎಸ್​ಎಸ್​ಎಸ್).

    ಬಾಲಿವುಡ್​ ಸ್ಟಾರ್​ಗಳಿಗೆ ಸವಾಲೆಸೆದ ರಾಮ್​ಗೋಪಾಲ್ ವರ್ಮಾ; ಭಾರತೀಯ ಚಿತ್ರರಂಗಕ್ಕೇ ಹೀಗೊಂದು ಪ್ರಪೋಸಲ್ ಇಟ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts