More

    ವಿಭಾಗ ಮಟ್ಟಕ್ಕೆ ಮೈಸೂರು, ತಿ.ನರಸೀಪುರ ತಂಡ

    ಎಚ್.ಡಿ.ಕೋಟೆ: ಪಟ್ಟಣದ ವಿಶ್ವಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪದವಿಪೂರ್ವ ಕಾಲೇಜು ಜಿಲ್ಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ಖೊ- ಖೋ ಪಂದ್ಯಾವಳಿಯಲ್ಲಿ ಮೈಸೂರು ತಾಲೂಕು ಹಾಗೂ ತಿ.ನರಸೀಪುರ ತಂಡಗಳು ಜಯಗಳಿಸಿದವು.


    ಕ್ರೀಡಾಕೂಟದಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಟಿ.ನರಸೀಪುರ ಹಾಗೂ ನಂಜನಗೂಡು ತಾಲೂಕುಗಳಿಂದ ಬಾಲಕಿಯರು ಮತ್ತು ಬಾಲಕರ 14 ತಂಡಗಳು ಭಾಗವಹಿಸಿದ್ದವು. ಖೊ-ಖೋ ಪಂದ್ಯಾವಳಿಗೆ ತಹಸೀಲ್ದಾರ್ ರತ್ನಾಂಬಿಕಾ ಚಾಲನೆ ನೀಡಿದರು.


    ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ಬಾಲಕರ ತಂಡದ ನಡುವೆ ನಡೆದ ಖೋ ಖೋ ಪಂದ್ಯಾವಳಿ ರೋಮಾಂಚಕಾರಿ ಆಗಿತ್ತು. ಪೈನಲ್ಗೆ ನರಸೀಪುರ ಹಾಗೂ ಮೈಸೂರು ಬಾಲಕರ ತಂಡದ ನಡುವೆ ಸ್ಪರ್ಧೆ ಏರ್ಪಟ್ಟು ಮೈಸೂರು ತಂಡ ಟಿ.ನರಸೀಪುರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಗಳಿಸಿತು. ಟಿ.ನರಸೀಪುರ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ನಂಜನಗೂಡು ಮತ್ತು ಟಿ.ನರಸೀಪುರ ಬಾಲಕಿಯರ ತಂಡದ ನಡುವೆ ನಡೆದ ಹಣಾಹಣಿಯಲ್ಲಿ ನಂಜನಗೂಡು ತಂಡವನ್ನು ಟ.ನರಸೀಪುರ ತಂಡ ಮಣಿಸಿ ಪ್ರಥಮ ಸ್ಥಾನ ಗಳಿಸಿತು. ಈ ಮೂಲಕ ಮೈಸೂರು ಬಾಲಕರ ತಂಡ ಹಾಗೂ ಟಿ.ನರಸೀಪುರ ಬಾಲಕಿಯರ ತಂಡ ವಿಭಾಗೀಯ ಮಟ್ಟಕ್ಕೆ ಆಯ್ಕೆ ಆದವು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts