More

    ವಿಪರೀತ ಮಳೆಯಿಂದ ತಂಬಾಕು ಬೆಳೆ ನಾಶ

    ಕಟ್ಟೆಮಳಲವಾಡಿ: ರೈತರ ಒಂದು ವರ್ಷದ ಶ್ರಮ ಹಾಗೂ ಭವಿಷ್ಯವನ್ನು ಪ್ಯಾಕ್ (ಬೇಲ್) ಮಾಡಿ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಗೆ ತಂದಿದ್ದಾರೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.


    ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸೋಮವಾರ ಹರಾಜಿಗೆ ಬಂದಿದ್ದ ಬೇಲ್‌ಗಳಿಗೆ ಪೂಜೆ ಮಾಡುವ ಮೂಲಕ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.


    ತಂಬಾಕು ಬೆಳೆಗೂ ರೈತರಿಗೂ ಭಾವನಾತ್ಮಕ ಸಂಬಂಧ ಇದೆ. ಆದರೆ ಈ ವರ್ಷ ಟ್ರೇಡರ್ಸ್‌ ಲಾಭದ ದೃಷ್ಟಿಯಲ್ಲಿ ರೈತರ ಬೇಲ್‌ಗಳನ್ನು ಕೊಂಡುಕೊಳ್ಳದೆ ಅವರಿಗೆ ಒಳ್ಳೆಯ ಬೆಲೆ ಕೊಡುವ ಮೂಲಕ ಅವರನ್ನು ಉಳಿಸಬೇಕಿದೆ. ಈ ವರ್ಷ ವಿಪರೀತ ಮಳೆಯಿಂದ ತಂಬಾಕು ಸಸಿಗಳು ನಾಶವಾಗಿವೆ.

    ಮತ್ತೊಂದೆಡೆ ಕಟಾವಿಗೆ ಬಂದಿದ್ದ ಎಲೆಗಳನ್ನು ಮುರಿದು ಹದ ಮಾಡಲಾಗದೆ ಹಣ್ಣಾಗಿ ಹೋಗಿದ್ದು ರೈತ ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ರೈತನ ಹತ್ತಿರ ಇರುವ ಹೊಗೆಸೊಪ್ಪಿಗೆ ಉತ್ತಮ ಬೆಲೆ ಕೊಡುವ ಮೂಲಕ ಕಂಪನಿಗಳು ರೈತರನ್ನು ಉಳಿಸಬೇಕು ಎಂದರು.


    ಮಂಡಳಿಯ ಅಧಿಕಾರಿಗಳು ಕಳೆದ ವರ್ಷ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆಗಳ ಬಗ್ಗೆ ಹಲವು ಬೇಡಿಕೆಗಳನ್ನು ಇಟ್ಟಿದ್ದೆ. ಆದರೆ ಯಾವುದೂ ಈಡೇರಿಲ್ಲ. ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸೂಚಿಸಿದರು.


    ಬಾಕ್ಸ್
    ಈ ಬಾರಿ ಉತ್ತಮ ತಂಬಾಕಿಗೆ ಕೆ.ಜಿ 202 ರೂ. ಗಳಿಗೆ ಮಾರಾಟವಾಗಿದ್ದು ಕಳೆದ ವರ್ಷ 185 ರೂ.ಗಳಿಗೆ ಪ್ರಾರಂಭವಾಗಿತ್ತು. ಈ ವರ್ಷ 26 ಕಂಪನಿಗಳು ತಂಬಾಕು ಖರೀದಿಲು ನೋಂದಣಿ ಮಾಡಿಕೊಂಡಿದ್ದು, ಮೊದಲ ದಿನ 16 ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಖರೀದಿಸಿವೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಣ್ ರಾವ್ ತಿಳಿಸಿದರು.


    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ತಗಡಯ್ಯ, ಮಾಜಿ ಅಧ್ಯಕ್ಷ ನಟರಾಜು, ರೈತ ಮುಖಂಡರಾದ ಶ್ರೀಧರ, ದಿಲೀಪ, ವಿಜಿಶಟ್ಟಿ, ಚಂದ್ರೇಗೌಡ, ಪ್ರಭಾಕರ್, ನಂಜುಂಡೇಗೌಡ, ರಾಮೇಗೌಡ, ಹರಾಜು ಅಧೀಕ್ಷಕರಾದ ಧನ್‌ರಾಜ್, ಸಿದ್ದರಾಮ್ ಢಾಂಗೆ ಸೇರಿದಂತೆ ಕಂಪನಿಯ ಮುಖ್ಯಸ್ಥರು, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts