More

    ವಿದ್ಯೆಯಿಂದ ಮೈಗೂಡುವ ಸಂಸ್ಕೃತಿ, ಎಸ್‌ಡಿಎಂಸಿ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್ ಅಭಿಪ್ರಾಯ

    ತ್ಯಾಮಗೊಂಡ್ಲು: ವಿದ್ಯಾವಂತರಾದರೆ ಸಂಸ್ಕೃತಿ, ಸಂಸ್ಕಾರ, ಭಕ್ತಿ ಎಲ್ಲವೂ ಮೈಗೂಡುತ್ತವೆ ಎಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್ ಅಭಿಪ್ರಾಯಪಟ್ಟರು.

    ಕರ್ನಾಟಕ ಪಬ್ಲಿಕ್ ಶಾಲೆಯ ಹಳೇ ವಿದ್ಯಾರ್ಥಿಗಳು ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಎಂಎಸ್‌ಸಿ ಬಯೋಟೆಕ್ನಾಲಜಿಯಲ್ಲಿ ಮೂರು ಚಿನ್ನದ ಪದಕ ಸಾಧನೆ ಮಾಡಿದ ಬಿದಲೂರಿನ ೈರೋಜಾ ಬಾನು ಹಾಗೂ ಎಂಎಸ್‌ಸಿ ಪ್ರಾಣಿಶಾಸ ವಿಭಾಗದಲ್ಲಿ 2 ಚಿನ್ನದ ಪದಕ ಗಳಿಸಿದ ಬಿ.ಎಸ್. ಪವಿತ್ರಾ ಹಾಗೂ ಅವರನ್ನು ಸನ್ಮಾನಿಸಿ ಮಾತನಾಡಿದರು.

    ೈರೋಜಾ ಬಾನು ಮತ್ತು ಬಿ.ಎಸ್. ಪವಿತ್ರಾ ಇಬ್ಬರೂ ಬಿದಲೂರಿನವರು. ಚಿನ್ನದ ಪದಕ ಸಾಧನೆ ಮೂಲಕ ಇವರಿಬ್ಬರೂ ಇತರೆ ವಿದ್ಯಾರ್ಥಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಇವರಿಬ್ಬರ ಹಾದಿಯಲ್ಲಿ ಸಾಗಿ ಇನ್ನೂ ಉನ್ನತ ಸಾಧನೆ ಮಾಡಬೇಕು ಎಂದರು.

    ಉಪ ಪ್ರಾಂಶುಪಾಲ ಎಂ. ಮಂಜುನಾಥ್ ಮಾತನಾಡಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅದಕ್ಕೆ ಬೇಕಾಗಿರುವುದು ಓದುವುದರಲ್ಲಿ ಒಂದಷ್ಟು ಶ್ರಮ ಎಂದು ಹೇಳಿದರು.

    ವಿದ್ಯಾರ್ಥಿನಿ ೈರೋಜಾ ಬಾನು ಮಾತನಾಡಿ, ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಿದ ಕ್ಷಣಕ್ಕಿಂತ ಹುಟ್ಟಿದೂರಿನಲ್ಲಿ, ವ್ಯಾಸಂಗ ಮಾಡಿದ ಶಾಲೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಸಂತಸ ತಂದಿದೆ ಎಂದರು.

    ವಿದ್ಯಾರ್ಥಿನಿ ಬಿ.ಎಸ್. ಪವಿತ್ರಾ ಮಾತನಾಡಿ, ಖುಷಿಯಿಂದ ಓದಬೇಕು. ಒಂದು ಕಲ್ಲಿಗೆ ಉಳಿ ಪೆಟ್ಟು ಬಿದ್ದಾಗಲೇ ಅದು ಕಲೆಯಾಗಲು ಸಾಧ್ಯ. ಅದರಂತೆ ಓದುವ ಸಮಯದಲ್ಲಿ ಉಪಾಧ್ಯಾಯರು ನೀಡುವ ಶಿಕ್ಷೆ ನಮ್ಮ ಶ್ರೇಯಸ್ಸಿಗೆ ಎಂಬುದನ್ನು ಅರ್ಥ ಮಾಡಿಕೊಂಡು, ತಪ್ಪನ್ನು ತಿದ್ದಿಕೊಳ್ಳಬೇಕು. ಶ್ರೇಷ್ಠವಾದ ಸಂಸ್ಕಾರವನ್ನು ಹೊಂದಬೇಕು. ಆಗಲೇ ನಾವು ಮುಂದು ಬರಲು ಸಾಧ್ಯ ಎಂದು ಹೇಳಿದರು.

    ಜೆಡಿಎಸ್ ಯುವಘಟಕದ ಜಿಲ್ಲಾ ಉಪಾಧ್ಯಕ್ಷ ಬೈರೇಗೌಡ, ಶಾಲೆಗೆ ಒಂದು ಲಕ್ಷ ರೂ. ಮೌಲ್ಯದ ವಿಜ್ಞಾನದ ಉಪಕರಣಗಳನ್ನು ನೀಡುವುದಾಗಿ ಭರವಸೆ ನೀಡಿದರು.

    ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎನ್. ಹನುಮಂತರಾಜು, ನಾಮನಿರ್ದೇಶಿತ ಸದಸ್ಯ ಮಹಿಮಣ್ಣ, ಹಿರಿಯ ಶಿಕ್ಷಕ ಪಿ.ಜೆ. ದಿನೇಶ್, ಮುಖಂಡರಾದ ಎಂ.ವಿ. ಶಿವಕುಮಾರ್, ಎಂ. ವತ್ಸಲಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts