More

    ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡಿ

    ಬೀದರ್: ಕರೊನಾ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕ ಮನ್ನಾ ಮಾಡಬೇಕೆಂದು ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕ ಆಗ್ರಹಿಸಿದೆ.
    ಶುಕ್ರವಾರ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಪ್ರಮುಖರು, ಕರೊನಾದಿಂದ ಅನೇಕ ಸಮಸ್ಯೆ ಎದುರಾಗಿವೆ. ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡಿ ಎಲ್ಲರಿಗೂ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
    ಕೇಂದ್ರ, ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್ಡೌನ್ನಿಂದ ದೇಶಾದ್ಯಂತ 16 ಕೋಟಿ ಅಸಂಘಟಿತ ವಲಯ ಕಾರ್ಮಿಕರು ಮತ್ತು ಸಂಘಟಿತ ವಲಯದ 2 ಕೋಟಿಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಪೋಷಕರು ಮಕ್ಕಳ ಶಾಲೆ ಶುಲ್ಕ ಭರಿಸದಂಥ ದುಸ್ಥಿತಿಗೆ ಸಿಲುಕಿದ್ದಾರೆ. ಎಷ್ಟೋ ಜನ ಶುಲ್ಕ ಭರಿಸದೆ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಆನ್ಲೈನ್ ಪಾಠ ಬೋಧಿಸುತ್ತಿರುವುದರಿಂದ ಬಡವರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಲಾಗುತ್ತಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
    ಜಿಲ್ಲಾಧ್ಯಕ್ಷ ಎಂ.ಡಿ. ಜಮೀಲ್ಖಾನ್, ಸಂಯೋಜಕ ಸೈಯದ್ ವಹೀದ್ ಲಖನ್, ಪ್ರಮುಖರಾದ ರಾಜಕುಮಾರ ಮೂಲಭಾರತಿ, ದತ್ತು ಸೂರ್ಯವಂಶಿ, ಪ್ರಕಾಶ ಕೋಟೆ, ಅಶೋಕ ಮಂಠಾಳಕರ್, ತಿಪ್ಪಣ್ಣ ವಾಲಿ, ಹುಲೆಪ್ಪ ಬಾಳೂರ, ಜಾಫರ್ ಖುರೇಷಿ, ಫಹೀಮ್ ಪಟೇಲ್, ಸತ್ಯದೀಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts