More

    ವಿದ್ಯಾರ್ಥಿಗಳು ಸ್ವಸಾಮರ್ಥ್ಯ ಸದ್ಬಳಕೆ ಮಾಡಲಿ

    ವಿಜಯಪುರ: ಚಂದ್ರಯಾನ-3ರ ಯಶಸ್ಸಿನ ಹಿಂದೆ ಅಪಾರ ಜನರ ಪರಿಶ್ರಮವಿದೆ. ನಮ್ಮ ಭಾಗದ ವಿದ್ಯಾರ್ಥಿಗಳಲ್ಲಿಯೂ ಸರ್ವ ಸಾಮರ್ಥ್ಯವಿದ್ದು ಎಲ್ಲ ರಂಗಗಳಲ್ಲಿಯೂ ಮುಂದುವರಿಯಬೇಕು ಎಂದು ಮುಖ್ಯ ಅತಿಥಿ, ಇಸ್ರೋ ವಿಜ್ಞಾನಿ ವಿಲಾಸ ರಾಥೋಡ ಹೇಳಿದರು.

    ನಗರದ ಜುಮನಾಳ ಕ್ರಾಸ್ ಬಳಿಯ ಪ್ರಾರ್ಥನಾ ಪಬ್ಲಿಕ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ, ವಾರ್ಷಿಕ ಸ್ನೇಹ ಸಮ್ಮೇಳನ, ಚಂದ್ರಯಾನ-3ರ ಮಾದರಿ ಪ್ರದರ್ಶನ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.

    ಪ್ರಾರ್ಥನಾ ಸಮೂಹ ಸಂಸ್ಥೆಗಳ ಚೇರ್ಮನ್ ಎಚ್.ಎಂ.ಸಾರವಾಡ ಮಾತನಾಡಿದರು. ವೇದಿಕೆಯನ್ನು ಭಾರತೀಯ ವಿಜ್ಞಾನಿಗಳಿಗೆ ಅರ್ಪಿಸುವಂತೆ ರೂಪಿಸಲಾಗಿತ್ತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿಭಾಗದಲ್ಲಿ ನೂರಕ್ಕೆ ನೂರು ಹಾಗೂ ಭೌತಶಾಸ್ತ್ರ- ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ನರ್ಸರಿಯಿಂದ ಪಿಯು ವಿಭಾಗದವರಿಗೂ ವಿದ್ಯಾರ್ಥಿಗಳ ಸಾಧನೆಯನ್ನು ಗಮನಿಸಿ ಅವರಿಗೆ ಸನ್ಮಾನಿಸಲಾಯಿತು.

    ಮದರ ಥೆರೇಸಾ ಚಿಲ್ಡ್ರನ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಪ್ರಾರ್ಥನಾ ಶಾಲೆಗೆ ಅತ್ಯುತ್ತಮ ಶಾಲೆ, ಸತೀಶ ವಾಲಿಕಾರ(ಅತ್ಯುತ್ತಮ ಪ್ರಾಂಶುಪಾಲ), ನಿರ್ಮಲಾ ಡಿ.(ಉಪಪ್ರಾಂಶುಪಾಲ) ಹಾಗೂ ಅರವಿಂದ ರಾಠೋಡ ಅವರಿಗೆ ಉತ್ತಮ ಚಿತ್ರಕಲೆ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇಎಸ್‌ಇಎಫ್ ಮಹಾರಾಷ್ಟ್ರ ಸರ್ಕಾರದಿಂದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ನೀಡಲಾಯಿತು.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನಿಗಳಿಗೆ ಅದ್ಭುತವಾಗಿ ಅಭಿನಂದನೆ ಸಲ್ಲಿಸುವ ನೃತ್ಯ ಹಾಗೂ ಮುದ್ದು ಮಕ್ಕಳ ಇತರ ನೃತ್ಯಗಳು ಎಲ್ಲರ ಗಮನ ಸೆಳೆದವು.

    ಅತಿಥಿ ಕಾಂತಾ ನಾಯಕ, ಸಂಸ್ಥೆ ಅಧ್ಯಕ್ಷ ಬಿ.ಎಸ್. ಕಾಖಂಡಕಿ, ಸೆಕ್ರೆಟರಿ ಎ.ಎಚ್.ಸಾರವಾಡ, ಪಿಯು ವಿಭಾಗದ ಪ್ರಾಂಶುಪಾಲ ಮಂಜುನಾಥ ಟಿ.ಜೆ., ಪ್ರಾರ್ಥನಾ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ನವೀನ್ ಜಾರ್ಜ್, ಪ್ರಾರ್ಥನಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸತೀಶ ವಾಲಿಕಾರ, ಉಪಪ್ರಾಂಶುಪಾಲೆ ನಿರ್ಮಲಾ.ಡಿ. ಹಾಗೂ ಶಾಲೆಯ ಬೋಧಕ- ಬೋಧಕೇತರ ಸಿಬ್ಬಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts