More

    ವಿದ್ಯಾರ್ಥಿಗಳಿಗೆ ದಿನಸಿ ವಿತರಣೆ

    ಧಾರವಾಡ: ಕೋಚಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಗಮಿಸಿ ಲಾಕ್​ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿದ್ದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಎಬಿವಿಪಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್ ಸ್ಪಂದಿಸಿದೆ. ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ನಿಷೇಧಾಜ್ಞೆಯಿಂದ ಪಡಿಪಾಟಲು ಅನುಭವಿಸುತ್ತಿದ್ದರು. ದಿನಸಿ ಪದಾರ್ಥಕ್ಕೂ ಪರದಾಡುತ್ತಿದ್ದ ವಿದ್ಯಾರ್ಥಿಗಳು ಸಹಾಯಹಸ್ತದ ನಿರೀಕ್ಷೆಯಲ್ಲಿದ್ದರು. ಈ ಕುರಿತು ವಿಜಯವಾಣಿ ಏ. 13ರಂದು ‘ಕೋಚಿಂಗ್ ವಿದ್ಯಾರ್ಥಿಗಳ ಪಾಡು ಕೇಳೋರಿಲ್ಲ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿ ಎಬಿವಿಪಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್​ನ ಪ್ರತಿನಿಧಿಗಳು, ನಗರದ ಸಪ್ತಾಪುರ, ಜಯನಗರ, ಇತರೆಡೆ ಇದ್ದ ವಿದ್ಯಾರ್ಥಿಗಳನ್ನು ಬುಧವಾರ ಸಂರ್ಪಸಿದ್ದರು. ಅಗತ್ಯ ವಸ್ತುಗಳ ಬೇಡಿಕೆ ಪಡೆದು ಗುರುವಾರ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ‘ಕರೊನಾ ಹಿನ್ನೆಲೆಯಲ್ಲಿ ಊರಿಗೂ ಹೋಗಲಾರದೆ ಪರದಾಡುತ್ತಿದ್ದ ನಮಗೆ ಕೊಂಚ ಸಹಾಯ ಲಭಿಸಿದೆ. ಅಡುಗೆ ಮಾಡಿಕೊಳ್ಳಲು ಅಕ್ಕಿ, ಅಡುಗೆ ಎಣ್ಣೆ, ಉಪ್ಪು, ತರಕಾರಿ ನೀಡಿರುವ ಎಬಿವಿಪಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್​ವೆುಂಟ್ ಪ್ರತಿನಿಧಿಗಳಿಗೆ ಧನ್ಯವಾದಗಳು’ ಎಂದು ವಿದ್ಯಾರ್ಥಿಗಳಾದ ಶ್ರೀಮಂತ ಸಿದ್ರಾಮ ನಾಯ್ಕ, ಅಪ್ಪು ಹರಳಯ್ಯ, ಸಾಗರ ಹವಾಲ್ದಾರ್ ಹಾಗೂ ಇತರರು ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts