More

    ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ

    ಅಥಣಿ ಗ್ರಾಮೀಣ: ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಸತ್ತಿ ಹಾಗೂ ದೊಡವಾಡ ಗ್ರಾಮಸ್ಥರು ಶುಕ್ರವಾರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಏಂಟು ದಿನದಿಂದ ಈ ಗ್ರಾಮಗಳಿಗೆ ಕೇವಲ 6 ಗಂಟೆ ವಿದ್ಯುತ್ ಪೂರೈಸುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿಲ್ಲ. ಜತೆಗೆ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದ್ದು, ಗ್ರಾಮಗಳಿಗೆ ಕಡ್ಡಾಯವಾಗಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆ ವಿಷಯ ತಿಳಿದು ಅಥಣಿ ಹೆಸ್ಕಾಂ ಎಇ ವಿಜಯಕುಮಾರ ಕೋಲೆ, ಎಇಇ ಎಂ.ಎಸ್.ಅವಟಿ, ಅಥಣಿ ಸಿಪಿಐ ರವೀಂದ್ರ ನಾಯಕವಾಡಿ ಹಾಗೂ ಪಿಎಸ್‌ಐ ಶಿವಶಂಕರ ಮುಕರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರಾದರೂ ಪ್ರತಿಭಟನಾಕಾರರು ಪಟ್ಟು ಬಿಡಲಿಲ್ಲ.

    ಹೆಸ್ಕಾಂ ಎಇ ವಿಜಯಕುಮಾರ ಕೋಲೆ ಮಾತನಾಡಿ, ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ನೀಡಲಾಗುವುದು. ವಾರದೊಳಗೆ 7 ಗಂಟೆ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

    ತಾಪಂ ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಪಿಕೆಪಿಎಸ್ ಅಧ್ಯಕ್ಷ ಬಿ.ಆರ್.ಪಾಟೀಲ, ಬಸವರಾಜ ದಳವಾಯಿ, ಎಂ.ಎನ್.ಪಾಟೀಲ, ಹನುಮಂತ ಜಗದೇವ, ಕಾಂತು ಹುದ್ದಾರೆ, ಮುರುಗೇಶ ಐಗಳಿ, ಶಿವಾನಂದ ನಂದೇಶ್ವರ, ಶ್ರೀಶೈಲ ಚಮಕೇರಿ, ಸುರೇಶ ಬಿರಡಿ, ಬಸವರಾಜ ನಾವಿ, ರಾವಸಾಬ ಮಟ್ಟೆಪ್ಪನವರ, ಗುರಪ್ಪ ಬುಶನ್ನವರ, ಅಣ್ಣಪ್ಪ ಹುದ್ದಾರ, ಮಲ್ಲಯ್ಯ ಮಠದ, ವಸಂತ ಸೋಲನಕಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts