More

    ವಿಡಿಯೋ ಹಂಚಿದವರ ಬಂಧನಕ್ಕೇಕೆ ಮೀನಾಮೇಷ?:ಎಸ್.ದ್ಯಾವೇಗೌಡ ಪ್ರಶ್ನೆ

    ಹಾಸನ: ಅಶ್ಲೀಲ ವಿಡಿಯೋಗಳನ್ನು ಜಿಲ್ಲೆಯಾದ್ಯಂತ ಹಂಚಿರುವಂತಹ ನಾಲ್ವರ ಜಾಮೀನು ಅರ್ಜಿ ವಜಾಗೊಂಡರೂ ಅವರನ್ನು ಬಂಧಿಸಲು ಪೊಲೀಸ್ ಇಲಾಖೆ ಮೀನಾಮೇಷ ಎನಿಸುತ್ತಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹಾಗೂ ವಕೀಲ ಎಸ್.ದ್ಯಾವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
    ಪ್ರಜ್ವಲ್ ರೇವಣ್ಣ ಅವರ ಫೋಟೋ ಬಳಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಹಂಚಿರುವ ಸಂಬಂಧ ಈಗಾಗಲೇ ಅವರ ಚುನಾವಣಾ ಏಜೆಂಟಾಗಿದ್ದ ವಕೀಲ ಪೂರ್ಣಚಂದ್ರ ತೇಜಸ್ವಿ ಎಂಬುವರು ನಗರದ ಸಿಇಎನ್ ಠಾಣೆಗೆ ಏ.23ರಂದು ಐವರ ವಿರುದ್ಧ ದೂರು ನೀಡಿದ್ದರು. ಆದರೂ ಅವರನ್ನು ಬಂಧಿಸಿಲ್ಲ. ಅಲ್ಲದೆ ಬುಧವಾರ ಅವರಲ್ಲಿ ನಾಲ್ವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡು 24 ಗಂಟೆ ಕಳೆದರೂ ಯಾರೊಬ್ಬರ ಬಂಧನ ಆಗಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಂಡ ಒಂದು ಗಂಟೆಯಲ್ಲೇ ಅಧಿಕಾರಿಗಳು ಅವರನ್ನು ಬಂಧಿಸಿದರು. ಆದರೆ ಜಿಲ್ಲೆಯ ಪೊಲೀಸರು ಇದುವರೆಗೂ ವಿಡಿಯೋ ಹಂಚಿಕೆ ಪ್ರಕರಣದ ಆರೋಪಿಗಳಾದ ಕಾರ್ತಿಕ್, ಪುಟ್ಟರಾಜು, ಶರತ್, ನವೀನ್, ಚೇತನ್ ಎಂಬುವರನ್ನು ಬಂಧಿಸಿಲ್ಲ. ತಕ್ಷಣವೇ ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
    ಕ್ವಾಲಿಟಿ ಬಾರ್ ಶರತ್ ಎಂಬುವರು ಜಾಮೀನು ಅರ್ಜಿಯನ್ನೇ ಹಾಕಿಲ್ಲ. ಆದರೂ ಕೂಡ ಯಾರನ್ನೂ ಬಂಧಿಸಿಲ್ಲ. ಇದನ್ನು ಗಮನಿಸಿದರೆ ಸರ್ಕಾರದ ಒತ್ತಡದಿಂದ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ತಕ್ಷಣವೇ ಇವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ವಕೀಲರಾದ ಶೇಷಾದ್ರಿ, ಸಂದೀಪ್, ಜಿ.ಎಲ್. ನಿಂಗರಾಜು, ಎಂ.ಜಿ. ಗೋಪಾಲ್, ನಯನಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts