More

    ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ

    ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಶಿಕ್ಷಕರಿಗೆ ಆನ್​ಲೈನ್​ನಲ್ಲಿ ವಿಜ್ಞಾನ ಹಾಗೂ ಗಣಿತ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನ ಏರ್ಪಡಿಸಲಾಗಿತ್ತು.

    ಸಾರ್ವಜನಿಕ ಶಿಕ್ಷಣ ಇಲಾಖೆ, ಏಕಸ್ ಪ್ರತಿಷ್ಠಾನ, ಸೋನಾಟಾ ಸಾಫ್ಟವೇರ್, ಕಾರ್ಲ ಬೇಕಾಮ್ ಸಿಪ್ಲಾ ಪ್ರತಿಷ್ಠಾನ ಮತ್ತು ಸಿನಾಪ್ಸಿಸ್ ಸಹಯೋಗ ನೀಡಿದ್ದವು.

    ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಗೋವಾ ರಾಜ್ಯ ಸೇರಿ 35 ಶಿಕ್ಷಕರು ಪಾಲ್ಗೊಂಡಿದ್ದರು. ಐದು ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಲಾಯಿತು. ಸರ್ಕಾರಿ ಪ್ರೌಢಶಾಲೆ ಕೇರಿ (ಗೋವಾ)ಯ ದಿಗಂಬರ ಭಾಜೆ ತಯಾರಿಸಿದ ಮೆಕ್ಯಾನಿಕ್ಸ್, ಸರ್ಕಾರಿ ಪ್ರಾಥಮಿಕ ಶಾಲೆ ಗುಡಗಾನಟ್ಟಿ(ಬೆಳಗಾವಿ)ಯ ದೇವೇಂದ್ರ ಬಡಿಗೇರ ತಯಾರಿಸಿದ ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಜರ್, ಸರ್ಕಾರಿ ಪ್ರಾಥಮಿಕ ಶಾಲೆ ಬೆಳಗಲಿ(ಧಾರವಾಡ)ಯ ವಿಜಯಕುಮಾರ ತಯಾರಿಸಿದ ಪರಮಾಣುವಿನ ರಚನೆ ಮತ್ತು ರಾಸಾಯನಿಕ ಬಂಧಗಳು, ಸ್ವಸ್ತಿಕ್ ವಿದ್ಯಾಲು (ಗೋವಾ)ದ ಜ್ಯೋತಿ ತಯಾರಿಸಿದ ಚತುರ್ಭಜಗಳು, ಸರ್ಕಾರಿ ಪ್ರಾಥಮಿಕ ಶಾಲೆ (ಛಬ್ಬಿ)ಯ ಪಿ. ಖಟಾವಕರ ತಯಾರಿಸಿದ ಗಣಿತದ ಆಕೃತಿಗಳ ಮಾದರಿಗೆ ಅತ್ಯುತ್ತಮ ಮಾದರಿಗಳೆಂದು ಆಯ್ಕೆ ಮಾಡಿ ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಗೆ ಕಳುಹಿಸಲು ನಿರ್ಧರಿಸಲಾಯಿತು.

    ತೀರ್ಪಗಾರರಾಗಿ ಸತೀಶ ಗೊಡಕಿಂಡಿ, ಬಸವರಾಜ ರಾಮದುರ್ಗ ಕಾರ್ಯನಿರ್ವಹಿಸಿದರು. ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ರಾಮಜೀ ರಾಘವನ್, ನಿರ್ದೇಶಕ ಸಾಯಿ ಚಂದ್ರಶೆಖರ, ಪ್ರಾದೇಶಿಕ ಮುಖ್ಯಸ್ಥೆ ಡಾ. ಬಬಿತಾ ಎಂ. ಪಿ., ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts