More

    ವಿಜಯಪುರ ಮಹಾನಗರ ಪಾಲಿಕೆ‌ ಚುನಾವಣೆ, ಮೀಸಲಾತಿಗೆ 92 ಆಕ್ಷೇಪಣೆ ಸಲ್ಲಿಕೆ, ಮುಂದೇನು?

    ವಿಜಯಪುರ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ 92 ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಎಲ್ಲ ಆಕ್ಷೇಪಣೆ ಕ್ರೋಡೀಕರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ರಾಜ್ಯ ಸರ್ಕಾರ ಪರಿಶೀಲಿಸಿ ಅಂತಿಮ ಮೀಸಲಾತಿ ಪ್ರಕಟಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

    ರಾಜ್ಯ ಸರ್ಕಾರ ಆ. 8 ರಂದು ಮಹಾನಗರ ಪಾಲಿಕೆಗೆ ಮೀಸಲಾತಿ ಪ್ರಕಟಿಸಿತ್ತು. ಆಕ್ಷೇಪಣೆ ಸಲ್ಲಿಕೆಗೆ ಏಳು ದಿನ ಕಾಲಾವಕಾಶ ಇತ್ತು. ಆ ಪ್ರಕಾರ ಆ.15 ರಂದು ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳಲಿದೆ ಎಂದು ಗುರುವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿ ಶೇ.50 ರಷ್ಟು ಮೀಸಲಾತಿ ಇರಬೇಕು. 35 ವಾರ್ಡ್ ಇರುವುದರಿಂದ 17 ವಾರ್ಡ್ ಮೀಸಲಾಗಿದ್ದು, 18 ಮೀಸಲೇತರ ವಾರ್ಡ್ ಎಂದು ಘೋಷಿಸಲಾಗಿದೆ. ಇದರಲ್ಲಿ 5 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, ಉಳಿದ 11 ಹಿಂದುಳಿದ ವರ್ಗ ಎಂದು ನಿಗದಿಯಾಗಿದೆ. ಇದರಲ್ಲಿ 9 ಹಿಂದುಳಿದ ವರ್ಗ ಅ ಮತ್ತು ಎರಡು ಹಿಂದುಳಿದ ವರ್ಗ ಬ ಎಂದಾಗಿದೆ.
    ಮೀಸಲಾತಿ ಬದಲಾವಣೆಗೆ ಸಾಕಷ್ಟು ಆಕ್ಷೇಪಣೆ ಸಲ್ಲಿಸಿದ್ದಾರೆ. ನಿಯಮಾನುಸಾರ ಪರಿಶೀಲಿಸಿ ಸರ್ಕಾರ‌‌ ನಿರ್ಧಾರ ಕೈಗೊಳ್ಳಲಿದೆ ಎಂದರು.

    ರೌಡಿ ಶೀಟರ್ ಗಳ ಮೇಲೆ ನಿಗಾ:
    ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ರೌಡಿಶೀಟರ್ ಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಎಸ್ ಪಿ ಆನಂದಕುಮಾರ ತಿಳಿಸಿದರು.

    ಈಗಾಗಲೇ ರೌಡಿಪರೇಡ್ ನಡೆಸಿ ಸೆಕುರಿಟಿ‌ ಕೇಸ್ ಹಾಕಲಾಗಿದೆ. ಅವರಿಂದ ಬಾಂಡ್ ಕೂಡ ಬರೆಯಿಸಿಕೊಳ್ಳಲಾಗಿದೆ. ಅವರಿಂದ ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಬರೆಯಿಸಿಕೊಳ್ಳಲಾಗಿದೆ. ಇನ್ಮುಂದೆ ಅಂಥ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts