More

    ವಾಹನಗಳ ಎಲ್​ಇಡಿ ಲೈಟ್ ತೆರವು

    ಕಾರವಾರ: ವಾಹನಗಳಿಗೆ ಹೆಚ್ಚುವರಿಯಾಗಿ ಎಲ್​ಇಡಿ ಲೈಟ್​ಗಳನ್ನು ಅಳವಡಿಸಲು ಅವಕಾಶವಿಲ್ಲ. ಅವುಗಳನ್ನು ತೆಗೆದು, ನಾಶ ಮಾಡಿ ಎಂದು ಸಾರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಪುರುಷೋತ್ತಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಇಲ್ಲಿನ ಆರ್​ಟಿಒ ಕಚೇರಿಗೆ ಆಗಮಿಸಿ ಅವರು ಇಲಾಖೆಯ ಪ್ರಗತಿ ಪರಿಶೀಲಿಸಿದರು.

    ಮರು ನೋಂದಣಿಗೆ ಬಂದ ಆರೋಗ್ಯ ಇಲಾಖೆ ಸರ್ಕಾರಿ ವಾಹನಗಳಿಗೂ ಹೆಚ್ಚುವರಿಯಾಗಿ ಲೈಟ್ ಅಳವಡಿಸಿರುವುದನ್ನು ಈ ಸಂದರ್ಭದಲ್ಲಿ ತೆರವು ಮಾಡಲಾಯಿತು.

    ಕಳೆದ ಐದಾರು ತಿಂಗಳಲ್ಲಿ ನೂರಕ್ಕೂ ಹೆಚ್ಚು ವಾಹನಗಳು ಹೆಚ್ಚುವರಿಯಾಗಿ ಅಳವಡಿಸಿದ ಬಣ್ಣ, ಬಣ್ಣದ ಎಲ್​ಇಡಿ ಲೈಟ್​ಗಳನ್ನು , ಗುತ್ತಿಗೆ ಆಧಾರದ ಮೇಲೆ ಇಲಾಖೆಗಳು ಪಡೆದ ವಾಹನಗಳ ಮೇಲೆ ಅಳವಡಿಸಿದ ಫಲಕಗಳನ್ನು ತೆರವು ಮಾಡಲಾಗಿದೆ ಎಂದು ಆರ್​ಟಿಒ ಆನಂದ ಪಾರ್ಥನಹಳ್ಳಿ, ಬ್ರೆಕ್ ಇನ್ಸ್​ಪೆಕ್ಟರ್ ರವಿ ಬೀಸರವಳ್ಳಿ ಮಾಹಿತಿ ನೀಡಿದರು.

    ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುರುಷೋತ್ತಮ ಅವರು, ಗೋವಾದಿಂದ ರಾಜ್ಯಕ್ಕೆ ಬರುವ ವಾಹನಗಳಿಗೆ ಶುಲ್ಕ ಪಡೆಯಲು ಗೋವಾ ಗಡಿಯಲ್ಲಿ ತಪಾಸಣಾ ಕೇಂದ್ರ ತೆರೆಯುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts