More

    ವಾಲ್ಮೀಕಿ ಆದರ್ಶ ರೂಢಿಸಿಕೊಳ್ಳಿ

    ಮುಳಗುಂದ: ಮಹರ್ಷಿ ವಾಲ್ಮಿಕಿ ಅವರ ಆದರ್ಶ ರೂಢಿಸಿಕೊಳ್ಳಬೇಕು ಎಂದು ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ಹೇಳಿದರು. ಪಪಂ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದರು. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪಪಂ ಸದಸ್ಯ ಬಸವರಾಜ ಹಾರೋಗೇರಿ, ಎಚ್.ಎಂ. ನಾಯಕರ, ಬಸವರಾಜ ಹೊರಪೇಟಿ, ಕಾಸೀಮಸಾಬ್ ಜಮಾಲಸಾಬನವರ, ಮುನೀರ್ ನದ್ದೀಮುಲ್ಲಾ, ಪೌರ ಕಾರ್ವಿುಕರು ಇದ್ದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ನರಗುಂದ: ಜಗತ್ತಿನ ಯಾವುದೇ ಸಮಾಜ ಬದಲಾವಣೆ ಆಗಬೇಕಾದರೆ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ವಾಲ್ಮೀಕಿ ಸಮಾಜದ ನರಗುಂದ ತಾಲೂಕಾಧ್ಯಕ್ಷ ಜಿ.ಬಿ. ತಳವಾರ ಹೇಳಿದರು. ವಾಲ್ಮೀಕಿ ಸಮಾಜದಿಂದ ಪಟ್ಟಣದ ಸೋಮಾಪುರ ಬಡಾವಣೆಯ ಶ್ರೀ ಮಾರುತಿ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ವಾಲ್ಮೀಕಿ ಜಯಂತಿ ಆಚರಣೆ ಜತೆಗೆ ಅವರ ತತ್ತ್ವ ಸಿದ್ಧಾಂತ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪುರಸಭೆ ಸದಸ್ಯ ಚಂದ್ರಗೌಡ ಪಾಟೀಲ, ಮಂಜು ಮೆಣಸಗಿ, ರವಿ ತಳವಾರ, ಹನುಮಂತ ರಾಮಣ್ಣವರ, ಮಂಜು ತಳವಾರ, ಮಹೇಶ ತಳವಾರ, ಮಾರುತಿ ಅರ್ಭಣದ, ನಾಗಪ್ಪ ದೊಡಮನಿ, ಶ್ರೀನಿವಾಸ ವೆಂಕರಡ್ಡಿಯವರ, ಯೋಗೇಶ ತಿಗಡಿ, ಸಂತೋಷ ಬೆಳಹಾರ, ಸಂಒಮು ತಿಗಡಿ ಇತರರಿದ್ದರು. ಮನುಕುಲಕ್ಕೆ ಅಮೂಲ್ಯ ಕಾಣಿಕೆ ಶಿರಹಟ್ಟಿ: ಮಾನವೀಯ ಮೌಲ್ಯ, ಆದರ್ಶವನ್ನೊಳಗೊಂಡ ರಾಮಾಯಣ ಗ್ರಂಥವನ್ನು ಮನುಕುಲಕ್ಕೆ ನೀಡಿದ ಶ್ರೇಯಸ್ಸು ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ ಎಂದು ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು. ಪಟ್ಟಣದ ವಾಲ್ಮೀಕಿ ಪುತ್ಥಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ‘ರಾಮನ ಪಿತೃವಾಕ್ಯ ಪರಿಪಾಲನೆ, ಲಕ್ಷ್ಮನ ಸಹೋದರ ವಾತ್ಸಲ್ಯ ಮತ್ತು ಸೀತೆಯ ಪತಿಭಕ್ತಿ ಇವೆಲ್ಲ ಮಾನವೀಯ ಮೌಲ್ಯ ಸಂಬಂಧಗಳ ಪಾವಿತ್ರ್ಯೆಗೆ ಸಾಕ್ಷಿಯಾಗಿ ಭಾರತೀಯ ಕೌಟುಂಬಿಕ ಪರಂಪರೆಗೆ ಆದರ್ಶವಾಗಿವೆ’ ಎಂದರು. ಬಸವರಾಜ ತಳವಾರ, ಬಸನಗೌಡ ಪಾಟೀಲ, ಎ.ಒ. ಹೂಲಿಕಟ್ಟಿ, ಮಹೇಂದ್ರ ಉಡಚಣ್ಣವರ, ಮಂಜುನಾಥ ಶಂಕಿನದಾಸರ, ಪಪಂ. ಮಾಜಿ ಅಧ್ಯಕ್ಷ ಎಚ್.ಡಿ. ಮಾಗಡಿ, ಪಪಂ ಸದಸ್ಯ ಮಂಜುನಾಥ ಘಂಟಿ, ಪರಮೇಶ ಪರಬ, ಇಸಾಕ ಆದ್ರಳ್ಳಿ, ದೇವಪ್ಪ ಆಡೂರ, ಸಂದೀಪ ಕಪ್ಪತ್ತನವರ, ಸಂದೇಶ ಗಾಣಿಗೇರ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ರಾಮು ಕಂಬಳಿ, ಶ್ರೀನಿವಾಸ ಬಾರಬರ, ಮಲ್ಲೇಶ ತಳವಾರ, ಫಕೀರೇಶ ತಳವಾರ, ಪರಶುರಾಮ ಡೊಂಕಬಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts