More

    ವಾಲಿಬಾಲ್‌ನಲ್ಲಿ ಮೂರ್ನಾಡು ಪ್ರಥಮ

    ಕುಶಾಲನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಯುವಕರಲ್ಲಿ ಸ್ನೇಹ ಸಮ್ಮಿಲನವಾಗುತ್ತದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ ತಿಳಿಸಿದರು.

    ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯಸ್ವಾಮಿ ಷಷ್ಠಿಯ ಅಂಗವಾಗಿ ಕೂಡಿಗೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಮನೋಭಾವನೆಯಿಂದ ಒಗ್ಗೂಡಿ ಊರಿನಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಅದರಿಂದ ಯುವಕರ ಸಹಭಾಗಿತ್ವದಲ್ಲಿ ಊರು ಉದ್ಧಾರವಾಗಲಿದೆ ಎಂದು ತಿಳಿಸಿದರು.

    ಪಂದ್ಯಾವಳಿಯಲ್ಲಿ ಜಿಲ್ಲೆಯ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಮೂರ್ನಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಕೂಡಿಗೆಯ ಕೋಮನ್ ತಂಡ, ತೃತೀಯ ಸ್ಥಾನ ಕುಶಾಲನಗರದ ಸಹಾರ್ ಫ್ರೆಂಡ್ಸ್ ತಂಡ ಪಡೆದುಕೊಂಡಿತು.


    ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ.ನಾಗರಾಜ್ ಶೆಟ್ಟಿ, ಸಮಿತಿಯ ಕಿರಣ್, ಸೆಲ್ವ, ಆಲಿ, ದರ್ಶನ್, ಮಂಜುನಾಥ್, ಸಂತೋಷ್ ಮತ್ತು ಕ್ರೀಡಾ ಪ್ರೇಮಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts