More

    ವಾರದಲ್ಲಿ 5 ದಿನ ಬ್ಯಾಂಕ್ ಕೆಲಸ ಶೀಘ್ರವೇ ಜಾರಿ- ವೆಂಕಟಾಚಲಂ ಹೇಳಿಕೆ

    ದಾವಣಗೆರೆ: ಬ್ಯಾಂಕ್‌ಗಳಿನ್ನು ವಾರದಲ್ಲಿ ಐದು ದಿನವಷ್ಟೇ ಕಾರ್ಯನಿರ್ವಹಿಸುವ ಕುರಿತು ಚರ್ಚೆ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡುವುದು ಬಾಕಿ ಇದೆ ಎಂದು ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದರು.

    ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ (ಕೆಪಿಬಿಇಎಫ್)ನಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಬ್ಯಾಂಕ್ ಉದ್ಯೋಗಿಗಳ ಆರನೇ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್‌ಗಳು ಹಾಲಿ ಎರಡು, ನಾಲ್ಕನೇ ಶನಿವಾರಗಳಂದು ರಜೆ ಇರಲಿವೆ. ಪ್ರಸ್ತಾಪಿತ ಪದ್ಧತಿಯಲ್ಲಿ ಎಲ್ಲಾ ಶನಿವಾರ-ಭಾನುವಾರವೂ ರಜೆ ಇರಲಿದೆ ಎಂದು ಹೇಳಿದರು.

    2010ನೇ ಇಸವಿ ಬಳಿಕ ನೇಮಕಗೊಂಡ ಬ್ಯಾಂಕ್ ಉದ್ಯೋಗಿಗಳಿಗೆ ಹೊಸ ಪಿಂಚಣಿ ಪದ್ಧತಿ ಇದೆ. ಎಲ್ಲರಿಗೂ ಹಳೆಯ ಪಿಂಚಣಿ ಜಾರಿಯಾಗುವ ಬೇಡಿಕೆಗೆ ಕೇಂದ್ರ ಸಂಘ ಒತ್ತಡ ತಂದಿದ್ದು ಶೀಘ್ರ ಜಾರಿ ನಿರೀಕ್ಷೆ ಇದೆ ಎಂದರು.
    ಎಐಬಿಇಎ ಹೋರಾಟದಿಂದ ಸಮಾನ ವೇತನ, ಉದ್ಯೋಗ ಸುರಕ್ಷತೆ, ಮಹಿಳೆಯರಿಗೆ ಅಗತ್ಯ ಸೌಲಭ್ಯಗಳು ದೊರೆತಿವೆ. ಆದರೆ, ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದು ಇದರ ವಿರುದ್ಧ ಹೋರಾಟ ನಡೆಸಬೇಕಿದೆ. ಖಾಸಗೀಕರಣದಿಂದ ಮಹಿಳಾ ಉದ್ಯೋಗಿಗಳಿಗೆ ಸೌಲಭ್ಯಗಳು ಕೈ ತಪ್ಪಲಿವೆ. ಇದಕ್ಕೆ ಲಕ್ಷ್ಮೀ ವಿಲಾಸ್ ಬ್ಯಾಂಕಿನ ಖಾಸಗೀಕರಣವೇ ನಿದರ್ಶನವಾಗಿದೆ ಎಂದು ಹೇಳಿದರು.
    ಕೇಂದ್ರ ಸರ್ಕಾರ ಕಾರ್ಮಿಕರ ಕಾಯ್ದೆ, ಭವಿಷ್ಯನಿಧಿ, ಇ.ಎಸ್.ಐ., ಕನಿಷ್ಠ ವೇತನ ಸೇರಿ ಶ್ರಮಿಕರಿಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳಲ್ಲಿ ಬದಲಾವಣೆ ತರುತ್ತಿದೆ. ಮುಂದಿನ ದಿನಗಳಲ್ಲಿ ಇವು ಬ್ಯಾಂಕ್‌ನ ಮಹಿಳಾ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಸರ್ಕಾರಿ ಬ್ಯಾಂಕುಗಳ ಹುದ್ದೆಗಳಲ್ಲಿ ಹೊರಗುತ್ತಿಗೆ ಹೆಚ್ಚಿದೆ. ಬ್ಯಾಂಕ್ ಮಿತ್ರರ ಹೆಸರಿನಲ್ಲಿ 2 ಲಕ್ಷ ಜನರನ್ನು ಹೊರ ಗುತ್ತಿಗೆಯಲ್ಲಿ ನೇಮಕ ಮಾಡಲಾಗಿದೆ. ಇವರ ಸಂಖ್ಯೆ ಇನ್ನಷ್ಟು ಹೆಚ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
    ಎಐಬಿಇಎ ನ ಜಂಟಿ ಕಾರ್ಯದರ್ಶಿ ಲಲಿತಾ ಜೋಷಿ, ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ನ ಅಧ್ಯಕ್ಷ ಎಂ.ಎಸ್. ಶ್ರೀನಿವಾಸನ್, ಮಹಿಳಾ ಕೌನ್ಸಿಲ್‌ನ ಸಂಚಾಲಕಿ ಶ್ರೀಲತಾ ಕುಲಕರ್ಣಿ, ಭೀಮಸೇನ ಡಿಸೋಜಾ, ಕೆ.ಜಿ.ಪಣೀಂದ್ರ, ಕೆಪಿಬಿಇಎಫ್ ಮಹಿಳಾ ಸಮಿತಿ ಅಧ್ಯಕ್ಷೆ ಆರ್.ಎಸ್.ಸುಮತಿ,ಕೆಪಿಬಿಇಎಫ್ ಪ್ರಧಾನ ಕಾರ್ಯದರ್ಶಿ ಎಂ. ಜಯನಾಥ್, ಲೇಖಕಿ ಎಚ್.ಜಿ.ಜಯಲಕ್ಷ್ಮೀ, ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts