More

    ವಾಯುಭಾರ ಕುಸಿತ: ಗುಮ್ಮಟ ನಗರಿಯಲ್ಲಿ ವರುಣ ಸಿಂಚನ

    ವಿಜಯಪುರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಗುಮ್ಮಟ ನಗರಿಲ್ಲಿಯಲ್ಲಿ ವರುಣನ ಸಿಂಚನವಾಗುತ್ತಿದೆ.

    ಶುಕ್ರವಾರ ರಾತ್ರಿಯಿಂದಲೇ ತುಂತುರು ಹನಿ ಸುರಿಯುತ್ತಿದ್ದು ಶನಿವಾರ ಬೆಳಗಿನ ಜಾವದವರೆಗೂ ಮಳೆ ಹನಿಯುತ್ತಲೇ‌ ಇದೆ.

    ಸುತ್ತಲೂ ಮೋಡ ಮುಸುಕಿದ ವಾತಾವರಣವಿದ್ದು ಇಬ್ಬನಿ ಹರಡಿಕೊಂಡಿದೆ. ವಾಹನಗಳು ದೀಪ ಉರಿಸಿಕೊಂಡೇ ಸಂಚರಿಸುವಂತಾಗಿದೆ. ತಂಪಾದ ಸುಳಿಗಾಳಿ ಬೀಸುತ್ತಿದ್ದು ಜನ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ರಸ್ತೆಗಳಲ್ಲಿ ಜನದಟ್ಟಣೆ ತಗ್ಗಿದೆ.

    ಹವಾಮಾನ ತಜ್ಞರ ಪ್ರಕಾರ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ
    2.2 mm ಮಳೆಯಾಗಿದೆ. ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.  ಇನ್ನೂ ಎರಡು ದಿನ ಇದೇ ವಾತಾವರಣ ಇರಲಿದೆ.

    ದ್ರಾಕ್ಷಿ ಬೆಳೆ ಮೇಲೆ ಕೊಂಚ ವ್ಯತಿರಿಕ್ತ ಪರಿಣಾಮ ಬೀರಲಿದೆ.
    ಮೆಕ್ಕೆಜೋಳ, ಹತ್ತಿ ಕಟಾವಿಗೆ ತೊಂದರೆಯಾಗಲಿದೆ. ಮೆಣಸಿನಕಾಯಿ ಬಣ್ಣ ಬದಲಾಗುತ್ತದೆ.

    ಹಿಂಗಾರಿ ಬೆಳೆಗಳಾದ ಜೋಳ,‌ ಕಡಲೆಗೆ ಪೂರಕ ವಾತಾವರಣವಿದೆ. ತೊಗರಿ ಮತ್ತು ಕಡಲೆಗೆ ಕೀಟ ಬಾಧೆ ಹೆಚ್ಚಲಿದೆ. ರೈತರು ಕಟಾವು ಸಂದರ್ಭ
    ಕಾಳಜಿ ತೆಗೆದುಕೊಳ್ಳಲು ಹಿಟ್ನಳ್ಳಿ ಪ್ರಾದೇಶಿಕ ಕೃಷಿ ವಿಜ್ಞಾನ ಕೇಂದ್ರದ‌ ಹವಾಮಾನ ವಿಭಾಗದ ಮುಖ್ಯಸ್ಥ
    ಶಂಕರ ಕುಲಕರ್ಣಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts