More

    ವಾತೃಭಾಷೆ ಕಡೆಗಣನೆ ಸರಿಯಲ್ಲ, ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಮತ

    ನೆಲಮಂಗಲ: ಆಂಗ್ಲ ಶಿಕ್ಷಣ ವ್ಯಾಮೋಹಕ್ಕೆ ಒಳಗಾಗಿರುವ ಕನ್ನಡಿಗರು ವಾತೃಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

    ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವಾತನಾಡಿದರು.
    ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಬೃಹತ್ ಗಾತ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಶೇ.30 ಕನ್ನಡಿಗರು, ಶೇ.70 ಅನ್ಯಭಾಷಿಗರಿದ್ದಾರೆ. ದೇಶದ ಎಲ್ಲ ಭಾಷಿಗರಿಗೂ ಕರ್ನಾಟಕ ಆಶ್ರಯ ನೀಡಿದ್ದು, ಅವರೂ ಕನ್ನಡ ಭಾಷೆಯನ್ನು ಕಲಿಯಬೇಕಿದೆ. ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಯಲ್ಲಿ ನಾಡಿನ ಕವಿ, ಸಾಹಿತಿಗಳು ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದರು.
    ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದು ತಾಲೂಕಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು. ಜತೆಗೆ ಕನ್ನಡ ಚಿತ್ರರಂಗಕ್ಕೆ ಕುಟುಂಬ ಸಮೇತವಾಗಿ ಅಪಾರ ಕೊಡುಗೆ ನೀಡಿದ್ದ ಪುನೀತ್‌ರಾಜ್‌ಕುವಾರ್ ಮತಪಟ್ಟಿದ್ದು ಸಾಕಷ್ಟು ನೋವಿನ ಸಂಗತಿ ಎಂದರು.

    ತಹಸೀಲ್ದಾರ್ ಕೆ.ಮಂಜುನಾಥ್ ವಾತನಾಡಿ, ಕರ್ನಾಟಕ ಉತ್ತಮ ಸಂಸ್ಕೃತಿ, ಸಂಪದ್ಭರಿತ ಸಾಹಿತ್ಯ ತುಂಬಿರುವ ನಾಡು. ಈ ಸುಂದರ ನಾಡಿನಲ್ಲಿ ಜನಿಸಿರುವ ಪ್ರತಿಯೊಬ್ಬರೂ ಪುಣ್ಯವಂತರು. ಪಾಶ್ಚಿವಾತ್ಯ ಭಾಷೆ, ಸಂಸ್ಕೃತಿಯ ಅನುಕರಣೆ ಭರದಲ್ಲಿ ಕನ್ನಡ ಭಾಷೆಯನ್ನು ದೂರವಾಡುವುದು ಸರಿಯಲ್ಲ. ವಾತೃಭಾಷೆ, ಜನ್ಮಭೂಮಿ ಸ್ವರ್ಗಗಿಂತ ಮಿಗಿಲಾದವು ಎಂದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ವಾಡಿದ 10 ಮಂದಿ ಸಾಧಕರು ಸೇರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ 30ಕ್ಕೂ ಹೆಚ್ಚು ಮಂದಿಯನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

    ಕ್ಷೇತ್ರಶಿಕ್ಷಣಾಧಿಕಾರಿ ರಮೇಶ್, ನಗರಸಭೆ ಆಯುಕ್ತ ಮಂಜುನಾಥ್, ನಗರ ಠಾಣೆ ವತ್ತ ನಿರೀಕ್ಷಕ ಎ.ವಿ.ಕುವಾರ್, ಶಿರಸ್ತೇದಾರ್ ಶ್ರೀನಿವಾಸ್‌ಮೂರ್ತಿ, ವಿಮಲಾ, ರಾಜಸ್ವ ನಿರೀಕ್ಷಕ ಅಶ್ವತ್ಥ್, ಸುದೀಪ್, ಆಹಾರ ಇಲಾಖೆ ನಿರೀಕ್ಷಕ ಎ.ರವಿಕುವಾರ್, ಕಸಾಪ ಅಧ್ಯಕ್ಷ ಸಿ.ಕೇಶವ್‌ಮೂರ್ತಿ, ದಲಿತ ಕೂಲಿ ಕಾರ್ಮಿಕ ಸಂಟನೆ ಅಧ್ಯಕ್ಷ ಬಿ.ಎಂ.ಗಂಗಬೈಲಪ್ಪ, ಸರ್ಕಾರಿ ನೌಕರರ ಸಂ ತಾಲೂಕು ಅಧ್ಯಕ್ಷ ಟಿ.ವಾಸುದೇವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts