More

    ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

    ಕೊಕಟನೂರ: ಗ್ರಾಮದ ಬಿಸಿಎಂ ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕರ ವಸತಿ ನಿಲಯದ ಹಾಗೂ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಪ.ಪೂ ಕಾಲೇಜಿನ 8, ಪ್ರಥಮ ದರ್ಜೆ ಕಾಲೇಜಿನ 9 ಹಾಗೂ ಪ್ರೌಢಶಾಲೆಯ 2 ವಿದ್ಯಾರ್ಥಿಗಳು ಸೇರಿ ಒಟ್ಟು 19 ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪ್ರೌಢಶಾಲೆಯ 3 ವಿದ್ಯಾರ್ಥಿ ಸೇರಿ ಒಟ್ಟು 22 ವಿದ್ಯಾರ್ಥಿಗಳಲ್ಲಿ ಮತ್ತು ಬಿಸಿಎಂ ವಸತಿ ನಿಲಯದ ಓರ್ವ ವಾರ್ಡನ್ ಹಾಗೂ ಅಡುಗೆ ಸಹಾಯಕರಿಗೂ ಕರೊನಾ ಸೋಂಕು ತಗುಲಿದೆ. ಬಿಸಿಎಂ ವಸತಿ ನಿಲಯದಲ್ಲಿ 185 ವಿದ್ಯಾರ್ಥಿಗಳು ವಾಸವಿದ್ದು, ಜ. 21ರಂದು ತಪಾಸಣೆ ಮಾಡಲಾಗಿತ್ತು. ಸೋಂಕು ಪತ್ತೆಯಾದ ವಿದ್ಯಾರ್ಥಿಗಳಲ್ಲಿ ಯಾವ ರೋಗ ಲಕ್ಷಣ ಇಲ್ಲ. ಹಾಗಾಗಿ ವಿದ್ಯಾರ್ಥಿಗಳನ್ನು ಹೋಮ್ ಐಸೋಲೇಷನ್ ಮಾಡಿ, ಸರ್ಕಾರಿ ಆಸ್ಪತ್ರೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಗೆ ಮೂರು ದಿನ ರಜೆ ಘೋಷಿಸಿ, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿದೆ.

    ವೈದ್ಯಾಧಿಕಾರಿ ಡಾ. ಚಂದ್ರಕಾಂತ ಧೂಳಶೆಟ್ಟಿ ಬಿಸಿಎಂ ವಸತಿ ನಿಲಯ ಹಾಗೂ ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿ, ಸೋಮವಾರ ಎಲ್ಲ ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿ ಪಡೆಯಲಾಗುವುದು ಎಂದು ತಿಳಿಸಿದರು. ಕಿರಿಯ ತಾಂತ್ರಿಕ ಅಧಿಕಾರಿ ರವೀಂದ್ರ ಹವಾಲ್ದಾರ್, ಕಿರಿಯ ಆರೋಗ್ಯ ಸಹಾಯಕ ಆರ್.ಎಸ್. ಪಾಟೀಲ, ಶುಶ್ರೂಷಾಧಿಕಾರಿ ಾತೀಮಾ ಪಕಾಲಿ, ಬಿಸಿಎಂ ಅಧಿಕಾರಿ ಮಹೇಶ ಗಾಡಿವಡ್ಡರ, ಮೌಸೀನ್ ಸಲಕರ, ಅರಿಹಂತ ಹಂಜೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts