More

    ವಲಸೆ ಕಾರ್ವಿುಕರಿಗೆ ಬಟ್ಟೆ ವಿತರಣೆ

    ಧಾರವಾಡ: ಲಾಕ್​ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಶ್ರಯ ಪಡೆಯುತ್ತಿರುವ ವಿವಿಧ ಜಲ್ಲೆಗಳ ವಲಸೆ ಕಾರ್ವಿುಕರಿಗೆ ಜಿಲ್ಲಾಡಳಿತದ ವತಿಯಿಂದ ಬಟ್ಟೆಗಳನ್ನು ವಿತರಿಸಲಾಗಿದೆ.

    ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್​ಡೌನ್ ಘೊಷಣೆ ಮಾಡಿದ ಪರಿಣಾಮ ನೂರಾರು ಕಾರ್ವಿುಕರು ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಹಾಗೂ ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ ನೇತೃತ್ವದಲ್ಲಿ ತಂಡ ರಚಿಸಿ ಹುಬ್ಬಳ್ಳಿ, ಧಾರವಾಡ, ಅಳ್ನಾವರ ಹಾಗೂ ನೂಲ್ವಿ ಸೇರಿ ಒಟ್ಟು 9 ಸರ್ಕಾರಿ ಹಾಸ್ಟೇಲ್​ಗಳಲ್ಲಿ 395 ವಲಸೆ ಕಾರ್ವಿುಕರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.

    ಇದೀಗ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರ ಆಶಯದಂತೆ ಗರಗ ಗ್ರಾಮದ ಗ್ರಾಮೋದ್ಯೋಗ ಸಂಸ್ಥೆಯಿಂದ ರಿಯಾಯ್ತಿ ದರದಲ್ಲಿ ಖಾದಿ ಬನಿಯನ್, ಲುಂಗಿ ಹಾಗೂ ಟವೆಲ್ ವಿತರಿಸಲಾಗಿದೆ. ಈ ಕಾರ್ಯಕ್ಕಾಗಿ ಎಸ್​ಡಿಆರ್​ಎಫ್ ಅನುದಾನ ಬಳಕೆ ಮಾಡಲಾಗಿದೆ. ಮಹಿಳಾ ಕಾರ್ವಿುಕರಿಗೆ ದಾನಿಗಳು ನೀಡಿದ ಸೀರೆ, ಬಟ್ಟೆಗಳನ್ನು ನೀಡಲಾಗಿದೆ.

    9 ಹಾಸ್ಟೇಲ್​ಗಳಲ್ಲಿ 395 ಜನ ವಲಸೆ ಕಾರ್ವಿುಕರಿದ್ದು, 15 ಮಹಿಳೆಯರು 380 ಪುರುಷರಿದ್ದಾರೆ. ಸುಮಾರು 105 ಜನ ಹೊರ ರಾಜ್ಯದ ಕಾರ್ವಿುಕರಿದ್ದಾರೆ. ಇವರಲ್ಲಿ 150 ಜನ ಕೃಷಿ ಮತ್ತು ಕಟ್ಟಡ ಕಾರ್ವಿುಕರಾಗಿದ್ದು, ಅವರನ್ನು ಒಂದೆರಡು ದಿನಗಳಲ್ಲಿ ರಾಜ್ಯದ ಅವರ ಸ್ವಂತ ಸ್ಥಳಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಎನ್.ಆರ್. ಪುರುಷೋತ್ತಮ ತಿಳಿಸಿದ್ದಾರೆ.

    ಕಾರ್ವಿುಕರ ಕ್ಷೌರ ಮಾಡಿದ ನೌಕರರು:
    ವಸತಿ ವ್ಯವಸ್ಥೆ ಬಯಸಿ ಬಂದ ವಲಸೆ ಕಾರ್ವಿುಕರಲ್ಲಿ ಕೆಲವರು ಅಲೆಮಾರಿಗಳು, ಬುದ್ಧಿಮಾಂದ್ಯರೂ ಸೇರಿದ್ದಾರೆ. ಅವರ ಸ್ಥಿತಿ ನೋಡಿದ ಹಾಸ್ಟೇಲ್ ವಾರ್ಡ್​ನ್ಗಳಾದ ಅಸ್ಕರ್ ಅಲಿ ಹಿರೇಮನಿ, ಮಂಜುನಾಥ ಲಮಾಣಿ, ಸಿಬ್ಬಂದಿ ಗಂಗಾಧರ ಹುಲ್ಲೂರ, ದೇವೆಂದ್ರಪ್ಪ ನಾಗರಾಳ, ಸುನೀಲ ಸವಣೂರ, ರಷೀದ್ ಹಾಗೂ ರಾಮದೇವ ಸೇರಿ ಇತರರು ಕಾರ್ವಿುಕರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದಾರೆ. ಅಲ್ಲದೆ ಕ್ಷೌರವನ್ನೂ ಮಾಡಿ ಮಾನವೀಯತೆ ಮೆರೆದಿರುವುದು ಪ್ರಸಂಶನೀಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts