More

    ವರ್ಚುವಲ್ ಗ್ಲೋಬಲ್ ಗಣೇಶ ಹಬ್ಬ

    ಧಾರವಾಡ: ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕ ಕಲಾವಿದನಿಗೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಅನಿವಾಸಿ ಭಾರತೀಯರು ಖರೀದಿಸಿದ ಗಣೇಶ ಮೂರ್ತಿಗಳ ಪೂಜೆಯನ್ನು ದೂರದ ದೇಶದಿಂದಲೇ ನೋಡಿ ಕಣ್ತುಂಬಿಕೊಂಡರು.

    ಹೌದು, ಸಾರ್ವಜನಿಕ ಗಣೇಶೋ ತ್ಸವಕ್ಕೆ ನಿರ್ಬಂಧ ಹೇರಿದ್ದರಿಂದ ಕಲಾವಿದ ಮಂಜುನಾಥ ಹಿರೇಮಠ ಅವರು ವಿಡಿಯೋ ಮೂಲಕ ತಮ್ಮ ಕಷ್ಟ ಹೇಳಿಕೊಂಡಿದ್ದರು. ಇದನ್ನು ಗಮನಿಸಿದ ಅಮೆರಿಕ, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳಲ್ಲಿನ ಅನಿವಾಸಿ ಭಾರತೀಯರು ಸುಮಾರು 25ಕ್ಕೂ ಹೆಚ್ಚು ಮೂರ್ತಿ ಗಳನ್ನು ಖರೀದಿಸಿದ್ದರು.

    ಈ ಮೂರ್ತಿಗಳಿಗೆ ಕೆಲಗೇರಿಯ ಹಿರೇಮಠ ಅವರ ನಿವಾಸದಲ್ಲೇ ಪೂಜೆ ನಡೆಯುತ್ತಿದ್ದು, ಅವುಗಳನ್ನು ಖರೀದಿಸಿದ ಜನರು ಅಲ್ಲಿಂದಲೇ ಪ್ರತಿಷ್ಠಾಪನೆ ಪೂಜೆ ಗಮನಿಸಿ, ಸಂತಸಪಟ್ಟರು. ಇದಲ್ಲದೆ ಐದು ದಿನಗಳ ಕಾಲ ಝುೂಮ್ ಮೀಟಿಂಗ್ ಮೂಲಕ ಪೂಜೆ ಸಲ್ಲಿಸುವ ವಿಡಿಯೋ ತೋರಿಸಲಿದ್ದಾರೆ. ಗಣೇಶ ಮೂರ್ತಿಯ ನೇರ ದರ್ಶನ, ನಿತ್ಯದ ಪೂಜೆ ನಡೆಯುತ್ತಿದ್ದು, 5ನೇ ದಿನದ ವಿಸರ್ಜನೆ ಸಹ ಇದೇ ರೀತಿ ನಡೆಯಲಿದ್ದು, ಈ ಬಾರಿ ವರ್ಚುವಲ್ ಗ್ಲೋಬಲ್ ಗಣೇಶೋತ್ಸವಕ್ಕೆ ಚಾಲನೆ ದೊರೆತಂತಾಗಿದೆ.ಈ ಕುರಿತು ಮಾತನಾಡಿದ ಮಂಜುನಾಥ ಹಿರೇಮಠ, ರಾಜ್ಯ ಸರ್ಕಾರ ಸಾರ್ವಜನಿಕ

    ಗಣೇಶೋತ್ಸವ ನಿಷೇಧ ಮಾಡಿದ ಸಂದರ್ಭದಲ್ಲಿ 40 ದೊಡ್ಡ ಗಣಪತಿಗಳ ಆರ್ಡರ್ ರದ್ದಾಗಿತ್ತು. ಅವೆಲ್ಲವನ್ನೂ ಅನಿವಾಸಿ ಭಾರತೀಯರು ಖರೀದಿಸಲು ತೀರ್ವನಿಸಿದ್ದರು. ಆದರೆ, ನಂತರ ಸರ್ಕಾರ ಅವಕಾಶ ನೀಡಿದ್ದರಿಂದ 15 ಮೂರ್ತಿಗಳನ್ನು ಸ್ಥಳೀಯ ಮಂಡಳಿಗಳು ಖರೀದಿಸಿದ್ದು, ಉಳಿದ 25 ಮೂರ್ತಿಗಳನ್ನು ಅನಿವಾಸಿ ಭಾರತೀಯರು ಖರೀದಿಸಿದ್ದಾರೆ. ಅವರ ಇಚ್ಛೆಯಂತೆ ನಿತ್ಯ ಬೆಳಗ್ಗೆ, ಸಂಜೆ ಸುಮಾರು ಎರಡು ಗಂಟೆಗಳ ಕಾಲ ಪೂಜೆ ಸಲ್ಲಿಸಲಾಗುತ್ತಿದೆ. ಕರೊನಾ ಹಾವಳಿಯಿಂದ ನಾನು ಮಾತ್ರವಲ್ಲದೆ ಇನ್ನೂ ಅನೇಕ ಕಲಾವಿದರು ತೊಂದರೆಯಲ್ಲಿದ್ದಾರೆ ಎಂದು ಪ್ರಸ್ತಾಪಿಸಿದಾಗ ಅಂತಹ ಎಲ್ಲ ಕಲಾವಿದರಿಗೂ ತಲಾ 10 ಸಾವಿರ ರೂ. ಸಹಾಯಧನ ನೀಡಲು ಅನಿವಾಸಿ ಭಾರತೀಯರ ತಂಡ ತೀರ್ವನಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts