More

    ಸೌಕರ್ಯಗಳಿಂದ ಸಮೃದ್ಧ ಜೀವನ

    ಮುದೇನೂರು: ಸಮೀಪದ ಮೆಣೇದಾಳ ಗ್ರಾಪಂ ವ್ಯಾಪ್ತಿಯ ಹುಲಿಯಾಪೂರ ತಾಂಡಾದಲ್ಲಿ ಕಂದಾಯ ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಪೂರ ಸೋಮವಾರ ಹಕ್ಕು ಪತ್ರ ವಿತರಿಸಿದರು.

    ಗ್ರಾಮೀಣ ಭಾಗದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಜನರಿಗೆ ನೆರವು ಸಿಕ್ಕಿದೆ. ಹಳ್ಳಿಯಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳು ದೊರೆತಾಗ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಶರಣೇಗೌಡ ಪಾಟೀಲ್ ಬಯ್ಯಪೂರ ಹೇಳಿದರು.

    ತಾಂಡಾದಲ್ಲಿ ಬಹುದಿನದ ಬೇಡಿಕೆಯಾದ ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸವಾಗಿದೆ. ಗ್ರಾಮೀಣ ಜನತೆ ಸರ್ಕಾರದಿಂದ ಅನುಷ್ಠಾನಗೊಂಡ ಯೋಜನೆ ಮತ್ತು ಸೌಕರ್ಯಗಳನ್ನು ಪಡೆದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಬೇಕು. ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಬೇಕು ಎಂದು ತಿಳಿಸಿದರು.
    ಕುಷ್ಟಗಿ ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ತಾಂಡಾದಲ್ಲಿ ಬದುಕು ನಡೆಸುವ ಕುಟುಂಬಗಳಿಗೆ ಸರ್ಕಾರ ನೆರವು ನೀಡಿದ್ದು, ಈಗಾಗಲೇ ಹಕ್ಕು ಪತ್ರ ನೀಡಿದ ಫಲಾನುಭವಿಗಳು ಸರ್ಕಾರದಿಂದ ಜಾರಿಯಾದ ಯೋಜನೆಗಳನ್ನು ಸಕಾಲಕ್ಕೆ ಪಡೆಯಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.

    ಇದೇ ವೇಳೆ ತಾಂಡಾದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಕೋರಿ ನಿವಾಸಿಗಳು ಎಂಎಲ್ಸಿಗೆ ಮನವಿ ಸಲ್ಲಿಸಿದರು. ಮೆಣೇದಾಳ ಗ್ರಾಪಂ ಅಅಧ್ಯಕ್ಷ ದಾವಲಸಾಬ್ ಅಂಕಸದೊಡ್ಡಿ, ಉಪಾಧ್ಯಕ್ಷ ಸೋಮಣ್ಣ ಬುಡಕುಂಟಿ, ಸದಸ್ಯರಾದ ಮುರ್ತುಜಸಾಬ್, ಗೋಪಾಲ್, ಜಗದೀಶ, ಕರೀಂಸಾಬ್ ಕಂಬಾರ, ಹನುಮಗೌಡ, ತಾವರಗೇರಾ ಉಪ ತಹಸೀಲ್ದಾರ್ ಕೆ.ಶರಣಬಸವೇಶ, ಪಿಡಿಒ ಹನುಮಂತರಾಯ ಅಮರಾವತಿ, ಗ್ರಾಮ ಸಹಾಯಕ ಅಮಾಜೆಪ್ಪ ಲಿಂಗದಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts