More

    ವಡ್ಡರಹಟ್ಟಿ ಇನ್ಮುಂದೆ ಕಂದಾಯ ಗ್ರಾಮ

    ಚನ್ನರಾಯಪಟ್ಟಣ: ವಡ್ಡರಹಟ್ಟಿ ಗ್ರಾಮವನ್ನು ಅಧಿಕೃತವಾಗಿ ಕಂದಾಯ ಗ್ರಾಮವನ್ನಾಗಿ ಘೋಷಿಸಿ ಹಕ್ಕು ಪತ್ರ ನೀಡಲಾಗುತ್ತಿದೆ. ಮುಂದೆ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


    ಪಟ್ಟಣದ ನೌಕರರ ಭವನದಲ್ಲಿ ತಾಲೂಕಿನ ನುಗ್ಗೇಹಳ್ಳಿ ಹೋಬಳಿಯಲ್ಲಿ ಹೊಸದಾಗಿ ರಚಿಸಲಾದ ವಡ್ಡರಹಟ್ಟಿ ಕಂದಾಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ವಡ್ಡರಹಟ್ಟಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ವಡ್ಡರಟ್ಟಿ ಗ್ರಾಮಕ್ಕೆ ಕಂದಾಯ ಗ್ರಾಮದ ಮಾನ್ಯತೆ ದೊರೆತಿದೆ. ಈ ಗ್ರಾಮಗಳ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ದೊರೆಯದೆ ಅಭದ್ರತೆ ಕಾಡುತ್ತಿತ್ತು. ಈಗ ಹಕ್ಕುಪತ್ರ ವಿತರಣೆಯಾಗಿರುವುದು ನೆಮ್ಮದಿ ಮೂಡಿಸಿದೆ ಎಂದರು.


    10 ವರ್ಷದಿಂದ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ವಿವಿಧ ಯೋಜನೆಗಳ ಮೂಲಕ ಸಮಗ್ರ ಅಭಿವೃದ್ಧಿಪಡಿಸಿದ್ದೇನೆ ಎಂದು ತಿಳಿಸಿದರು.


    ತಹಸೀಲ್ದಾರ್ ಗೋವಿಂದರಾಜು, ರಾಜಸ್ವ ನಿರೀಕ್ಷಕ ಮಂಜುನಾಥ್, ಶಿರಸ್ತೇದಾರ್ ಪವನ್, ಗ್ರಾಮ ಲೆಕ್ಕಾಧಿಕಾರಿ ಓಬಳಾಪುರ ಬಸವರಾಜು, ಇಂದ್ರೇಶ್ ಬಾಗೂರು, ಶಂಕರ್ ಸಿದ್ದರಹಟ್ಟಿ, ವಡ್ಡರಹಟ್ಟಿ ರಾಜು, ನಾಗರಾಜು, ಜಯಣ್ಣ, ನಾಗಾಭೋವಿ, ರಂಗಾಭೋವಿ, ಕೆಂಗಾಭೋವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts