More

    ವಚನಗಳ ಸಂರಕ್ಷಕ ಫ.ಗು.ಹಳಕಟ್ಟಿ

    ಹೊಳೆನರಸೀಪುರ: ಫ.ಗು.ಹಳಕಟ್ಟಿ ಅವರು 22 ಸಾವಿರ ವಚನಗಳನ್ನು ಸಂರಕ್ಷಿಸಿ ‘ವಚನಗಳ ಸಂರಕ್ಷಕ’ ಎನಿಸಿದ್ದಾರೆ. ಅಂದು ಅವರು ವಚನಗಳನ್ನು ಸಂರಕ್ಷಿಸದಿದ್ದರೆ ನಮಗೆ ಅತ್ಯುತ್ತಮವಾದ, ಸತ್ವಯುತವಾದ ವಚನಗಳು ಸಿಗುತ್ತಿರಲಿಲ್ಲ ಎಂದು ರಾಜ್ಯ ಕದಳಿ ಮಹಿಳಾ ವೇದಿಕೆಯ ಸಂಚಾಲಕಿ ಸುಶೀಲಾ ಸೋಮಶೇಖರ್ ಹೇಳಿದರು.

    ರಾಜ್ಯ ಕದಳಿ ಮಹಿಳಾ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಂರಕ್ಷಣಾ ದಿನ ಹಾಗೂ ದತ್ತಿ ಉಪನ್ಯಾಸ, ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಳಕಟ್ಟಿ ಅವರನ್ನು ಕನ್ನಡದ ಮ್ಯಾಕ್ಸ್ ಮುಲ್ಲರ್ ಎನ್ನುತ್ತಾರೆ ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಂಜುರಾಜ್ ಮಾತನಾಡಿ, ಫ.ಗು.ಹಳಕಟ್ಟಿ 20ನೇ ಶತಮಾನದ ನಿಜ ಶರಣರು. ಅವರನ್ನು ವಚನ ಸಂರಕ್ಷಣೆಯ ಪಿತಾಮಹಾ ಎನ್ನುತ್ತಿದ್ದರು. 1880ರಲ್ಲಿ ಜನಿಸಿದ ಇವರು ವಚನಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅತ್ಯಂತ ಮಹತ್ವದ ವಚನಗಳನ್ನು ರಕ್ಷಿಸಿ ಆ ವಚನಗಳಲ್ಲಿನ ಮಹತ್ವ ನಮಗೆ ತಿಳಿಯುವಂತೆ ಮಾಡಿದರು ಎಂದು ವಿವರಿಸಿದರು.

    ಕದಳಿ ಮಹಿಳಾ ವೇದಿಕೆ ತಾಲೂಕು ಅಧ್ಯಕ್ಷೆ ಕಾವ್ಯಶ್ರೀ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ವಚನ ಸಾಹಿತ್ಯದ ಪರಂಪರೆ, ಶರಣರ ಪರಿಚಯ ಹಾಗೂ ಅವರ ಸಂದೇಶಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇಂತಹ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳಲ್ಲಿ ಆಯೋಜಿಸಿ ನಮ್ಮ ನಾಡಿನ ವಚನ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದರು.

    ಪ್ರಾಂಶುಪಾಲ ಮಾದಯ್ಯ ಮಾಕನಹಳ್ಳಿ, ಚಿಂತಕಿ ಸುನಂದಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ರಾಜಶೇಖರಯ್ಯ, ಪ್ರಾಧ್ಯಾಪಕ ನಿರಂಜನ್, ಸೌಭಾಗ್ಯ ಆಂತೋಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts