More

    ಲೋಹಿಯಾನಗರ ಸ್ಥಿತಿ ರಾಮ ರಾಮ..!

    ಹುಬ್ಬಳ್ಳಿ: ಸ್ಮಾರ್ಟ್​ಸಿಟಿ ಅನ್ನು ಅಣಕಿಸುವಂತಿವೆ ಇಲ್ಲಿನ ಡಾ. ರಾಮ ಮನೋಹರ ಲೋಹಿಯಾನಗರದ ರಸ್ತೆ ಹಾಗೂ ಹದಗೆಟ್ಟಿರುವ ಇತರ ಸೌಲಭ್ಯಗಳು. ತಗ್ಗು-ಗುಂಡಿಗಳಾಗಿ ಮಾರ್ಪಟ್ಟ ರಸ್ತೆ, ಒಡೆದ ತೆರೆದ ಚರಂಡಿ, ವಿಷಜಂತುಗಳ ತಾಣವಾದ ರಸ್ತೆ ಇಕ್ಕೆಲಗಳಲ್ಲಿನ ಗಿಡಗಂಟಿಗಳು ಸ್ಮಾರ್ಟ್​ಸಿಟಿ ಯೋಜನೆಗೆ ಅಪವಾದ ಎನ್ನುವಂತಿವೆ.

    ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಲ್ಲಿನ ರಸ್ತೆಗಳ ಡಾಂಬರ್ ಕಿತ್ತು ಹೋಗಿದ್ದು, ಸಂಪೂರ್ಣ ಮಣ್ಣಿನ ರಸ್ತೆಗಳಾಗಿ ಮಾರ್ಪಟ್ಟಿವೆ. ಈ ಮಧ್ಯೆ ಲೋಹಿಯಾ ನಗರದ ವಿವಿಧೆಡೆ ನಡೆಯುತ್ತಿರುವ ಹೊಸ ಮನೆಗಳ ನಿರ್ವಣಕ್ಕಾಗಿ ಸಿಮೆಂಟ್, ಉಸುಕು, ಇಟ್ಟಿಗೆ ಹೊತ್ತು ತರುವ ದೊಡ್ಡ ಲಾರಿಗಳ ಸಂಚಾರದಿಂದ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

    ಮೊದಲೇ ತಗ್ಗುಗಳಿದ್ದ ಈ ರಸ್ತೆಯಲ್ಲಿ ದೊಡ್ಡ ಲಾರಿಗಳ ಸಂಚಾರದಿಂದ ಮತ್ತಷ್ಟು ಆಳದ ತಗ್ಗುಗಳು ಬಿದ್ದಿವೆ. ಈ ರಸ್ತೆಯಲ್ಲಿ ವೃದ್ಧರ, ಮಕ್ಕಳ ಓಡಾಟ ಅಸಾಧ್ಯವೆಂಬಂತಾಗಿದ್ದು, ಅನೇಕ ಬಾರಿ ಬಿದ್ದಿದ್ದಾರೆ. ದ್ವಿಚಕ್ರ ವಾಹನಗಳ ಸವಾರರ ಸ್ಥಿತಿಯೂ ಹೊರತಾಗಿಲ್ಲ. ಲಾರಿಗಳ ಸಂಚಾರದಿಂದ ರಸ್ತೆ ಪಕ್ಕದ ತೆರೆದ ಚರಂಡಿಗಳೂ ಒಡೆದಿವೆ. ಅನೇಕ ಬಾರಿ ಈ ರಸ್ತೆಯ ತಗ್ಗುಗಳಲ್ಲಿ ಲಾರಿಗಳೂ ಸಿಲುಕಿಕೊಂಡಿವೆ.

    ಲೋಹಿಯಾ ನಗರದ 21, 22, 23, 24 ನೇ ಅಡ್ಡ ರಸ್ತೆಗಳ ಜತೆಗೆ ಅರ್ಜುನ ವಿಹಾರ, ಮುರಾರ್ಜಿ ನಗರದ ಮುಖ್ಯ ಹಾಗೂ ಅಡ್ಡ ರಸ್ತೆಗಳೂ ಹದಗೆಟ್ಟಿವೆ. ಈ ಪ್ರದೇಶದಲ್ಲಿ ಮೂಲ ಸೌಲಭ್ಯಗಳೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ ನಿರ್ವಣಗೊಂಡಿದೆ.

    ಈ ಪ್ರದೇಶದಲ್ಲಿ ರಸ್ತೆ ಹಾಗೂ ತೆರೆದ ಚರಂಡಿ ಹದಗೆಡಿಸಿದವರಿಗೆ ದಂಡ ವಿಧಿಸುವ ಜತೆಗೆ ರಸ್ತೆ ದುರಸ್ತಿಗೊಳಿಸಬೇಕು, ಬೇಕಾಬಿಟ್ಟಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇಲ್ಲಿನ ನಿವಾಸಿಗಳಾದ ರಾಜು ಹಿರೇವಡಿಯರ, ನಾಗರಾಜ ನಾಡಕರ್ಣಿ, ಆನಂದ ಬಳ್ಳಾರಿ, ಕಿರಣ ರಜಪೂತ, ಮಂಜುನಾಥ ಉಳ್ಳಾಗಡ್ಡಿ, ದೀಪಕ ಮುನವಳ್ಳಿ ಹಾಗೂ ಇತರರು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts