More

    ಲಿಂಗತ್ವ ಅಲ್ಪಸಂಖ್ಯಾತರ ಪ್ರಾಧಿಕಾರ ರಚಿಸಿ

    ಹಾವೇರಿ: ರಾಜಕೀಯದಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ವಿಶೇಷ ಪ್ರಾಧಿಕಾರ ರಚಿಸುವಂತೆ ಲಿಂಗತ್ವ ಅಲ್ಪಸಂಖ್ಯಾತರ ಪ್ರಾಧಿಕಾರ ರಚಿಸಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

    ನಗರದ ಖಾಸಗಿ ಹೋಟೆಲ್​ನಲ್ಲಿ ವಿಸ್ತಾರ, ಲಶ್ ಸಂಸ್ಥೆ ಹಾಗೂ ಸಂಜೀವಿನಿ ಲೈಂಗಿಕ ಅಥವಾ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಧರ್ಮ ಮತ್ತು ಲೈಂಗಿಕತೆ ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರು ಕಾಯಕದಲ್ಲಿ ಕೈಲಾಸ ಕಂಡವರು. ಮಂಗಳಮುಖಿಯರು ಅಮಂಗಳೆಯರಲ್ಲ. ದೈವೀ ಸ್ವರೂಪಿಯಾದ ಶುಭಮಂಗಳೆಯರು ಎಂಬ ಭಾವನೆಯಿಂದ ಅನೇಕರು ಅವರ ಕೈಯಿಂದ ನಾಣ್ಯಗಳನ್ನು ಸ್ವೀಕರಿಸಿದರೆ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಹೊಂದಿದ್ದಾರೆ ಎಂದರು.

    ವಿಚಾರ ಸಂಕಿರತಣಕ್ಕೆ ಚಾಲನೆ ನೀಡಿ ಮಾತನಾಡಿದ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎನ್.ಎಂ. ಸಾಲಿ, ಲಿಂಗತ್ವ ಅಲ್ಪಸಂಖ್ಯಾತರಿಗೂ ಮೂಲಸೌಕರ್ಯ ಸಿಗಬೇಕು. ಉತ್ತಮ ಶಿಕ್ಷಣ ಪಡೆದು ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

    ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ತೃತೀಯ ಲಿಂಗಿಗಳಿಗೆ ಸಮಾನತೆ ಕೊಡಬೇಕೆಂದು ಧ್ವನಿ ಎತ್ತಿದ್ದರು. ಧರ್ಮ, ತತ್ತ್ವ ಸಿದ್ಧಾಂತಗಳು ಹೊಸ ಹೊಸ ಆಲೋಚನೆಗಳಿಗೆ, ದಾರಿಗಳಿಗೆ ಮಾರ್ಗಸೂಚಿಯಾಗಬೇಕಿದೆ ಎಂದರು.

    ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಜಿಲ್ಲಾಧ್ಯಕ್ಷೆ ಅಕ್ಷತಾ ಕೆ.ಸಿ., ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದಿದ್ದಾರೆ. ಸಮಾಜದಲ್ಲಿ ಎಲ್ಲ ವರ್ಗದ ಜನರಿಗೆ ಸಿಗುವ ಸೌಕರ್ಯಗಳು ನಮಗೂ ಸಿಗುವಂತಾಗಬೇಕು ಎಂದರು.

    ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರ ಸಂಚಾಲಕ ಹಾಜಿಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ ಮಾತನಾಡಿದರು. ಡಾ. ಎಂ.ಎಚ್. ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಮಹ್ಮದ್ ಉಸ್ಮಾನ್, ಮಲ್ಲಪ್ಪ ಕುಂಬಾರ, ಶ್ರೀಕಾಂತ ಕನ್ನಣ್ಣವರ, ನಾಗರಾಜ ನಡುವಿನಮನಿ, ಮಾಲತೇಶ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts