More

    ಲಂಚ ಪಡೆದಿದ್ದ ಇಬ್ಬರಿಗೆ ಜೈಲು ಶಿಕ್ಷೆ

    ಚಿತ್ರದುರ್ಗ: ಖಾತೆ ಬದಲಾವಣೆಗಾಗಿ ಲಂಚ ಪಡೆದಿದ್ದ ಇಬ್ಬರು ಅಪರಾಧಿಗಳಿಗೆ ಜಿಲ್ಲಾ ಪ್ರಧಾನ ಸತ್ರ ಮತ್ತು ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ನಗರದ ಚನ್ನಕೇಶವಪುರ ಬಡಾವಣೆಯಲ್ಲಿ, ತಮ್ಮ ಮೃತ ತಾಯಿಯ ಹೆಸರಲ್ಲಿದ್ದ ನಿವೇಶನಗಳ ಖಾತೆಯನ್ನು ಪತ್ನಿ ಹೆಸರಿಗೆ ವರ್ಗಾಯಿಸಿಕೊಡುವಂತೆ ಕೋರಿ ಡಿ.ಆರ್.ಗೋಪಾಲರೆಡ್ಡಿ ಎಂಬುವರು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು.

    ಖಾತೆ ವರ್ಗಾಯಿಸಲು ಪ್ರಭಾರ ಕಂದಾಯ ನಿರೀಕ್ಷಕ ಸುರೇಶ್ ಮೂರುವರೆ ಸಾವಿರ ರೂ.ಲಂಚ ಕೇಳಿದ್ದರು. ಇದಕ್ಕೆ ಒಪ್ಪಿದ್ದ ಗೋಪಾಲರೆಡ್ಡಿ ಅವರಿಂದ ಸುರೇಶ್ ಉಪಸ್ಥಿತಿಯಲ್ಲೇ ಖಾಸಗಿ ವ್ಯಕ್ತಿ ತಿಪ್ಪೇಸ್ವಾಮಿ ಎಂಬಾತ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಪಿಐಗಳಾದ ಆರ್.ಎನ್.ವಾಸುದೇವ ಹಾಗೂ ಎನ್.ಮೃತ್ಯುಂಜಯ, ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ಅವರು, ಸುರೇಶ್‌ಗೆ 4 ವರ್ಷ ಸಜೆ, 25 ಸಾವಿರ ರೂ.ದಂಡ ಹಾಗೂ ತಿಪ್ಪೇಸ್ವಾಮಿಗೆ 3 ವರ್ಷ ಸಜೆ ಮತ್ತು ಒಂದು ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಬಿ.ಮಲ್ಲೇಶಪ್ಪ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts