More

    ರೋಟರಿ ಸಾಮಾಜಿಕ ಸೇವಾ ಸಂಸ್ಥೆ

    ಅಥಣಿ: ವಿಶ್ವದೆಲ್ಲೆಡೆ ಸಾಮಾಜಿಕ ಸೇವಾ ಸಂಸ್ಥೆಯಾಗಿ ರೋಟರಿ ಕ್ಲಬ್ ಜನಸಾಮಾನ್ಯರ ಸೇವೆಯಲ್ಲಿದೆ. ಸೇವೆಗೆ ಮಾತ್ರ ಅವಕಾಶವಿರುವ ವಿಶ್ವದ ಏಕೈಕ ಸಂಸ್ಥೆಯಾಗಿದೆ ಎಂದು ಅಥಣಿ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

    ಬಳೊಳ್ಳಿ ಾರ್ಮ್‌ಹೌಸ್‌ದಲ್ಲಿ ಮಂಗಳವಾರ ರೋಟರಿ ಸಂಸ್ಥೆಯ 118ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ವಿದ್ಯಾರ್ಥಿಗಳು, ಮಹಿಳೆಯರು, ಬಡವರಿಗೆ ವಿವಿಧ ಸೌಲಭ್ಯ ಕಲ್ಪಿಸುವುದು ರೋಟರಿ ಮೂಲ ಆಶಯವಾಗಿದೆ ಎಂದರು.

    ನೆರಹಾವಳಿ, ಪ್ರವಾಹ, ಕರೊನಾ ಮತ್ತಿತರರ ಸಂಕಷ್ಟ ಸಮಯದಲ್ಲಿ ಜನರಿಗೆ ನೆರವಾಗಿದೆ. ಅದೇ ರೀತಿ ಗ್ರಾಮೀಣ ಭಾಗದ ಶಾಲೆಗಳಿಗೆ ಗ್ರೀನ್ ಬೋರ್ಡ್, ಡೆಸ್ಕ್, ಕಂಪ್ಯೂಟರ್ ಹೀಗೆ ಮತ್ತಿತರರ ಸೌಲಭ್ಯ ನೀಡಿದೆ ಎಂದರು.

    ರೋಟರಿ ಕ್ಲಬ್ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ರೋಟರಿ ಕ್ಲಬ್ ವಿಶ್ವದ 210 ದೇಶಗಳಲ್ಲಿದೆ. 44 ಸಾವಿರ ಕ್ಲಬ್‌ಗಳಿವೆ, 14 ಲಕ್ಷ ಸದಸ್ಯರಿದ್ದಾರೆ. ಇದೊಂದು ಸಾಮಾಜಿಕ ಸೇವಾ ಸಂಸ್ಥೆಯಾಗಿದೆ ಎಂದರು.

    ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ ಬೊಮ್ಮಣವರ ಮಾತನಾಡಿ, ಎಲ್ಲ ಸದಸ್ಯರ ಸಹಕಾರದಿಂದ ರೋಟರಿ ಕ್ಲಬ್ ಯೋಜನೆಗಳು, ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ ಎಂದರು.

    ರೋಟರಿ ಸದಸ್ಯರಾದ ಭರತ ಸೋಮಯ್ಯ, ದೀಪಕ ಪಾಟೀಲ, ಬಾಳಪ್ಪ ಬುಕಿಟಗಾರ, ಶ್ರೀಕಾಂತ ಅಥಣಿ, ಡಾ.ಆನಂದ ಕುಲಕರ್ಣಿ, ಡಾ.ಅಮೃತ ಕುಲಕರ್ಣಿ, ಡಾ.ವಿಶ್ವನಾಥ ಚಿಮ್ಮಡ, ಸುರೇಶ ಬಳೊಳ್ಳಿ, ಅನಿಲ ದೇಶಪಾಂಡೆ, ಅರುಣ ಸೌದಾಗರ, ಸುರೇಶ ಪಾಟೀಲ, ಸಚಿನ ದೇಸಾಯಿ, ಪ್ರಶಾಂತ ಗೌರಾಣಿ, ಬಾಹುಬಲಿ ಅಸ್ಕಿ, ಮೋಹನ ಕಾಂಬಳೆ, ನಿಜಗುಣ ಜಿದ್ದಿ, ಹನುಮಂತ ಐಗಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts