More

    ರೈಲ್ವೆ ವಲಯದಲ್ಲಿನ್ನು ಕಾಗದ ರಹಿತ ಕಾರ್ಯ

    ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಕೇಂದ್ರ ಕಚೇರಿ ಹಾಗೂ ಇನ್ನುಳಿದ 3 ವಿಭಾಗೀಯ ಕಚೇರಿಗಳಲ್ಲಿ ಕಾಗದ ರಹಿತ ಕಾರ್ಯ ಪ್ರಾರಂಭಿಸುವುದಕ್ಕಾಗಿ ಎನ್​ಐಸಿ ಇ-ಆಫೀಸ್ ಸೌಲಭ್ಯ ಅಳವಡಿಸಲಾಗಿದೆ.

    ವಲಯ ಕೇಂದ್ರ ಕಚೇರಿ ಹಾಗೂ ವಿಭಾಗೀಯ ಕಚೇರಿಗಳಲ್ಲಿ ಇ-ಆಫೀಸ್ ಪ್ರಾರಂಭಿಸಿದ 2ನೇ ವಲಯ ಎಂಬ ಕೀರ್ತಿಗೆ ನೈಋತ್ಯ ರೈಲ್ವೆ ಪಾತ್ರವಾಗಿದೆ. ವಲಯ ಹಾಗೂ ವಿಭಾಗೀಯ ಕಚೇರಿಗಳಲ್ಲಿ ಇ-ಆಫೀಸ್ ನಿರ್ವಹಣೆಗಾಗಿ 2,473 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಕಡತಗಳ ನಿರ್ವಹಣೆ ಮತ್ತಿತರ ಕಾರ್ಯಗಳನ್ನು ಈ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಕಾರ್ಯವನ್ನು ಇದೇ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಭಾರತೀಯ ರೈಲ್ವೆ ಮತ್ತು ರೈಲ್​ಟೆಲ್ ಮಧ್ಯ ಮೊದಲ ಹಂತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

    ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ಕೇಂದ್ರ ಕಚೇರಿ ಮತ್ತು ಬೆಂಗಳೂರು ವಿಭಾಗೀಯ ಕಚೇರಿಯಲ್ಲಿನ ಸಿದ್ಧತೆಗಳು ಕಳೆದ ಜುಲೈನಲ್ಲಿ ಪೂರ್ಣಗೊಂಡಿವೆ. 2ನೇ ಹಂತದ ಒಪ್ಪಂದಕ್ಕೆ ಕಳೆದ ಜನವರಿಯಲ್ಲಿ ಸಹಿ ಹಾಕಲಾಗಿದೆ. ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದ ಕಚೇರಿಯಲ್ಲಿನ ಸಿದ್ಧತೆಗಳು ನಡೆದಿದ್ದು, 2,880 ಫೈಲ್​ಗಳು ಡಿಜಿಟಲ್ ಆಗಿ ಪರಿವರ್ತನೆಗೊಳ್ಳಲಿವೆ. ಇ ಕಚೇರಿಯ ಬಗ್ಗೆ ಮಾಹಿತಿ ನೀಡಿರುವ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್, ಈ ಸೌಲಭ್ಯದಿಂದಾಗಿ ದಾಖಲೆಗಳನ್ನು ಹುಡುಕುವುದು ಸುಲಭವಾಗಿದೆ. ರೈಲ್ವೆಗೆ ಸಂಬಂಧಿಸಿದ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳಬಹುದು ಎಂದರು. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ) ದ ಸಾಫ್ಟವೇರ್ ಆಗಿರುವ ಎನ್​ಐಸಿ ಇ-ಆಪೀಸ್​ನ್ನು ರೈಲ್​ಟೆಲ್ ಅಭಿವೃದ್ಧಿಪಡಿಸಿದೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಸಹಾಯವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts