More

    ರೈಲ್ವೆ ಬೋಗಿ ಬಳಕೆ ಕಾಲ ಸನ್ನಿಹಿತ

    ಹುಬ್ಬಳ್ಳಿ: ಹೆಚ್ಚುತ್ತಿರುವ ಕರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸಲು ನೈಋತ್ಯ ರೈಲ್ವೆ ವಲಯ 2 ತಿಂಗಳಿಗಿಂತ ಹಿಂದೆಯೇ ಸಿದ್ಧಪಡಿಸಿರುವ ಐಸೊಲೇಷನ್ ಬೋಗಿಗಳು ಬಳಕೆಯಾಗುವ ಕಾಲ ಸಮೀಪಿಸಿದೆ.

    ನೈಋತ್ಯ ರೈಲ್ವೆ ವಲಯ ತನ್ನ ವ್ಯಾಪ್ತಿಯಲ್ಲಿ ಸುಮಾರು ಎಸಿ ರಹಿತ 320 ರೈಲ್ವೆ ಬೋಗಿಗಳನ್ನು ಐಸೊಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸಿದೆ. ಇದರಲ್ಲಿ ಧಾರವಾಡ ಜಿಲ್ಲೆಯ ವಿವಿಧ ನಿಲ್ದಾಣಗಳಲ್ಲಿ 20 ಬೋಗಿಗಳನ್ನು ಇರಿಸಿದೆ.

    ಕಿಮ್್ಸ ಕೋವಿಡ್ ಆಸ್ಪತ್ರೆಯ ಹಾಸಿಗೆಗಳು ಭರ್ತಿಯಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆ ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ. ಈ ಮಧ್ಯೆ ಸಿದ್ಧ ಸ್ಥಿತಿಯಲ್ಲಿರುವ ರೈಲ್ವೆ ಐಸೊಲೇಷನ್ ಬೋಗಿಗಳನ್ನು ಸಹ ಬಳಸಿಕೊಳ್ಳುವ ಬಗ್ಗೆ ಜಿಲ್ಲಾಡಳಿತ ಶೀಘ್ರ ರೈಲ್ವೆ ಅಧಿಕಾರಿಗಳೊಂದಿಗೆ ರ್ಚಚಿಸಲಿದೆ.

    ನೈಋತ್ಯ ರೈಲ್ವೆ ವಲಯದಲ್ಲಿ ಐಸೊಲೇಷನ್ ಬೋಗಿ ಗಳನ್ನು ಸಿದ್ಧಪಡಿಸಿದ್ದರ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಏಪ್ರಿಲ್​ನಲ್ಲಿಯೇ ರೈಲ್ವೆ ಅಧಿಕಾರಿಗಳು ಪತ್ರ ಬರೆದಿದ್ದು, ಯಾವುದೇ ಸಮಯದಲ್ಲಿ ಅವುಗಳನ್ನು ಬಳಸಿಕೊಳ್ಳಬಹುದೆಂದು ಸಲಹೆ ನೀಡಿದೆ. ಹೆಚ್ಚುತ್ತಿರುವ ಕರೊನಾ ಸೋಂಕಿತರನ್ನು ಗಮನಿಸಿದರೆ ರೈಲ್ವೆ ಐಸೊಲೇಷನ್ ಬೋಗಿಗಳ ಬಳಕೆ ಅನಿವಾರ್ಯವಾಗಲಿದೆ.

    ಹೀಗಿದೆ ಬೋಗಿ: ರೈಲಿನ ಪ್ರತಿ ಬೋಗಿಯಲ್ಲಿ 9 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗವನ್ನು ವೈದ್ಯಕೀಯ ಸಿಬ್ಬಂದಿ ಹಾಗೂ ಆಕ್ಸಿಜನ್ ಸಿಲೆಂಡರ್, ಇತರ ವೈದ್ಯಕೀಯ ಉಪಕರಣಗಳನ್ನು ಇಡಲು ಮೀಸಲಿಡಲಾಗಿದೆ. ಇನ್ನುಳಿದ 8 ವಿಭಾಗಗಳನ್ನು 8 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಬಹುದು. ಪ್ರತಿ ವಿಭಾಗದ ಮಧ್ಯದ ಬರ್ತ್​ಅನ್ನು ತೆಗೆಯಲಾಗಿದೆ. ಒಂದೆಡೆ ಕರೊನಾ ಸೋಂಕಿತ ವ್ಯಕ್ತಿ ಮಲಗಲಿದ್ದು, ಮತ್ತೊಂದೆಡೆ ಆತನಿಗೆ ನೀಡುವ ಮಾತ್ರೆ ಹಾಗೂ ವೈದ್ಯಕೀಯ ಉಪಕರಣಗಳನ್ನು ಇರಿಸಲಾಗುತ್ತದೆ. ಬೋಗಿಯಲ್ಲಿರುವ 2 ಶೌಚಗೃಹಗಳಲ್ಲಿ ಒಂದನ್ನು ಸ್ನಾನಗೃಹವನ್ನಾಗಿ ಬದಲಾಯಿಸಲಾಗಿದೆ. ಮತ್ತೊಂದು ಶೌಚಗೃಹದಲ್ಲಿ ಕಮೋಡ್ ಜೋಡಿಸಲಾಗಿದೆ. ಈಗಾಗಲೇ ಒಂದು ಮಾದರಿ ಐಸೊಲೇಶನ್ ರೈಲ್ವೆ ಬೋಗಿಯನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗಿದೆ.

    ಐಸೊಲೇಷನ್ ರೈಲ್ವೆ ಬೋಗಿಗಳು ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸಿದ್ಧತಾ ಸ್ಥಿತಿಯಲ್ಲಿವೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಬೋಗಿಗಳನ್ನು ನೀಡಲು ಸಿದ್ಧ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಹಿಂದೆಯೇ ಪತ್ರ ಬರೆದು ಮಾಹಿತಿ ನೀಡಲಾಗಿದೆ.

    | ಇ. ವಿಜಯಾ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ

    ರೈಲ್ವೆ ವಲಯ

    ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಐಸೊಲೇಷನ್ ರೈಲ್ವೆ ಬೋಗಿಗಳನ್ನು ಬಳಸಿಕೊಳ್ಳುವ ಕುರಿತು ಶೀಘ್ರದಲ್ಲೇ ರೈಲ್ವೆ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ರೈಲ್ವೆ ಆಸ್ಪತ್ರೆಯಲ್ಲಿ ಮೀಸಲಿರಿಸಿರುವ ಹಾಸಿಗೆಗಳನ್ನೂ ಬಳಸಿಕೊಳ್ಳಲಾಗುವುದು.

    | ನಿತೇಶ ಪಾಟೀಲ

    ಜಿಲ್ಲಾಧಿಕಾರಿ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts