More

    ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅನುಮತಿ

    ಕಾರವಾರ: ತಿನೈಘಾಟ್-ಕ್ಯಾಸಲ್​ರಾಕ್- ಕರಂಜೋಲ್ ನಡುವೆ ಎರಡನೇ ರೈಲು ಮಾರ್ಗ ನಿರ್ವಣಕ್ಕೆ ಕೇಂದ್ರ ವನ್ಯಜೀವಿ ಮಂಡಳಿ (ಎನ್​ಬಿಡಬ್ಲ್ಯುಎಲ್) ಅನುಮತಿ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

    ವನ್ಯಜೀವಿ ಮಂಡಳಿಯ 60ನೇ ಸಭೆಯಲ್ಲಿ ಈ ಕುರಿತು ತೀರ್ವನವಾಗಿದೆ ಎಂದು ಅವರು ವಿವರಿಸಿದ್ದು, ಸಭೆಯ ಠರಾವುಗಳು ಇನ್ನಷ್ಟೇ ಲಭ್ಯವಾಗಬೇಕಿವೆ.

    ಕರ್ನಾಟಕದ ಹೊಸಪೇಟೆ ಹಾಗೂ ವಾಸ್ಕೋ ನಡುವಿನ 342 ಕಿಮೀ ರೈಲು ಮಾರ್ಗವನ್ನು 2,127 ಕೋಟಿ ರೂ.ಗಳಲ್ಲಿ ದ್ವಿಪಥ ಮಾಡುವ ಯೋಜನೆ 2010-11ರಿಂದ ನಡೆದಿದೆ. ಈಗಾಗಲೇ ಹೊಸಪೇಟೆಯಿಂದ ಅಂದಾಜು 250 ಕಿಮೀವರೆಗೆ ಎರಡು ಮಾರ್ಗಗಳು ನಿರ್ವಣವಾಗಿವೆ. ಇನ್ನೂ ಅಂದಾಜು 90 ಕಿಮೀಯಷ್ಟು ಮಾತ್ರ ಮಾರ್ಗ ದ್ವಿಪಥ ಕಾಮಗಾರಿ ಪರಿಸರ ಹಾನಿ ಕಾರಣದಿಂದ ವಿಳಂಬವಾಗಿದೆ.

    ಕ್ಯಾಸಲ್​ರಾಕ್​ನಿಂದ- ಕರಂಜೋಲ್​ವರೆಗೆ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಅಭಿಯಾರಣ್ಯ (ಕೆಟಿಆರ್)ವ್ಯಾಪ್ತಿಯಲ್ಲಿ ಮಾರ್ಗ ಹಾದು ಹೋಗಲಿದೆ. ಯೋಜನೆಗಾಗಿ ಕೆಟಿಆರ್​ನ 10.45 ಹೆಕ್ಟೇರ್ ಅರಣ್ಯ ಭೂಮಿಯನ್ನು ರೈಲ್ವೆ ಇಲಾಖೆಗೆ ವರ್ಗಾವಣೆ ಮಾಡಲು ಈಗಾಗಲೇ ನೈರುತ್ಯ ರೈಲ್ವೆ ಅರ್ಜಿ ಸಲ್ಲಿಸಿದೆ. ಇನ್ನು 5413 ಮರಗಳನ್ನು ಯೋಜನೆಗಾಗಿ ಕಡಿಯಬೇಕಾಗುತ್ತದೆ. ಇದರಿಂದ ದ್ವಿಪಥಕ್ಕೆ ವನ್ಯಜೀವಿ ಮಂಡಳಿ ಇದುವರೆಗೂ ಅನುಮೋದನೆ ನೀಡಿರಲಿಲ್ಲ.

    ವನ್ಯಜೀವಿ ಮಂಡಳಿ ಅನುಮತಿ ದೊರೆತರೂ ರೈಲ್ವೆ ಹಳಿ ನಿರ್ಮಾಣ ಕಾರ್ಯಕ್ಕೆ ಮಾರ್ಗವಿನ್ನೂ ಸುಗಮವಾಗಿಲ್ಲ. ಗೋವಾದ ಪರಿಸರ ಹೋರಾಟಗಾರರು ರೈಲ್ವೆ ಯೋಜನೆಗೆ ಸುಪ್ರೀಂ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಸುಪ್ರೀಂ ಕೋರ್ಟ್​ನಿಂದ ನೇಮಕವಾದ ವಿಶೇಷಾಧಿಕಾರಿ ಸಮಿತಿ (ಸಿಇಸಿ) ಸ್ಥಳ ಪರಿಶೀಲನೆ ನಡೆಸಿದೆ.

    ಮೂರು ಇಂಜಿನ್ ಬಳಕೆ
    ಗೋವಾದ ವಾಸ್ಕೋ ಹಾಗೂ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್​ರಾಕ್ ನಡುವೆ ಬ್ರಿಟಿಷ್ ಕಾಲದಲ್ಲೇ ರೈಲು ಹಳಿ ನಿರ್ಮಾಣ ವಾಗಿತ್ತು. ಪಶ್ಚಿಮ ಘಟ್ಟದ ಅಪರೂಪದ ಮರ ಮಟ್ಟುಗಳನ್ನು ವಾಸ್ಕೋ ಬಂದರಿಗೆ ಸಾಗಿಸಲು ಇದು ಬಳಕೆಯಾಗುತ್ತಿತ್ತು. ಕಡಿದಾದ ಗುಡ್ಡಗಳ ನಡುವೆ ಸುರಂಗ, ಸೇತುವೆ ನಿರ್ವಿುಸಿ ಮಾರ್ಗ ನಿರ್ವಿುಸಲಾಗಿದೆ. ಸಾಕಷ್ಟು ತಿರುವು ಹಾಗೂ ಏರಿಳಿತಗಳ ಮಾರ್ಗವಾಗಿದ್ದರಿಂದ ಮೂರು ಇಂಜಿನ್​ಗಳನ್ನು ಬಳಸಿ ರೈಲು ಓಡಿಸಲಾಗುತ್ತದೆ. ಇಲ್ಲಿ ಈಗ ದ್ವಿಪಥ ಕಾರ್ಯವೂ ರೈಲ್ವೆ ಇಲಾಖೆಗೆ ದೊಡ್ಡ ಸವಾಲು. ಎರಡನೇ ಮಾರ್ಗ ನಿರ್ವಣವಾದಲ್ಲಿ ರೈಲ್ವೆ ಇಲಾಖೆ ಆದಾಯ ದ್ವಿಗುಣಗೊಳ್ಳಲಿದೆ. ಜತೆಗೆ ಹೆಚ್ಚಿನ ಪ್ರಯಾಣಿಕರ ರೈಲುಗಳ ಓಡಾಟವೂ ಸಾಕಾರಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts