More

    ರೈಲಿಗಾಗಿ ಪರದಾಡಿದ ವಲಸೆ ಕಾರ್ವಿುಕರು

    ಹುಬ್ಬಳ್ಳಿ: ನಿತ್ಯ ಶ್ರಮಿಕ ಎಕ್ಸ್​ಪ್ರೆಸ್ ರೈಲುಗಳು ಸಂಚರಿಸುತ್ತಿ್ತೆ ಎಂದು ಭಾವಿಸಿ ಹುಬ್ಬಳ್ಳಿಗೆ ಬಂದಿದ್ದ ಬಿಹಾರ, ದೆಹಲಿ, ಹಿಮಾಚಲ ಪ್ರದೇಶ ಮೂಲದ ವಲಸೆ ಕಾರ್ವಿುಕರು ದಿಕ್ಕು ತೋಚದೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕುಳಿತಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.

    ಶಿವಮೊಗ್ಗದ ಶುಂಠಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಅಂದಾಜು 40 ಜನ ಹಾಗೂ ಬೆಂಗಳೂರಿನ ಖಾಸಗಿ ಸಾರಿಗೆ ಉದ್ಯಮದ ನೌಕರರಾದ ದೆಹಲಿ ಹಾಗೂ ಹಿಮಾಚಲ ಪ್ರದೇಶದ 10ಕ್ಕೂ ಹೆಚ್ಚು ಜನ ಹುಬ್ಬಳ್ಳಿಗೆ ಆಗಮಿಸಿದ್ದರು.

    ರೈಲ್ವೆ ನಿಲ್ದಾಣಕ್ಕೆ ತೆರಳಿದ ವಲಸೆ ಕಾರ್ವಿುಕರಿಗೆ ನಿಲ್ದಾಣದಲ್ಲಿ ನಿಲ್ಲಲು ಅಲ್ಲಿನ ಪೊಲೀಸರು ಅವಕಾಶ ನೀಡದ ಕಾರಣ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯುತ್ತ ಬಂದು, ವೃತ್ತದಲ್ಲಿಯೇ ಕುಳಿತಿದ್ದರು. ಹಿಮಾಚಲ ಪ್ರದೇಶ ಹಾಗೂ ದೆಹಲಿಗೆ ತೆರಳುವವರಿಗೆ ಜೂ. 1ರ ರೈಲಿನ ಟಿಕೆಟ್ ಸಿಕ್ಕಿದ್ದು, ಅಲ್ಲಿಯವರೆಗೆ ಊಟಕ್ಕೆ, ವಸತಿಗೆ ಏನು ಮಾಡಬೇಕೆಂದು ಅರಿಯದೇ ದಿಕ್ಕು ತೋಚದಂತಾಗಿದ್ದರು.

    ಸ್ಥಳಕ್ಕೆ ಆಗಮಿಸಿದ ಉಪ ನಗರ ಠಾಣೆ ಪೊಲೀಸರು, ಕಾರ್ವಿುಕ ಇಲಾಖೆ ಅಧಿಕಾರಿಯನ್ನು ಕರೆಯಿಸಿ ಎಲ್ಲ ಕಾರ್ವಿುಕರನ್ನು ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಕಳುಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts