More

    ರೈತ ಸಂಪರ್ಕ ಕೇಂದ್ರಕ್ಕೆ ಬೀಗ

    ಬಾಗೇಪಲ್ಲಿ : ಮುಂಗಾರು ಬಿತ್ತನೆಯ ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದರೂ ಕೃಷಿ ಸಹಾಯಕ ನಿರ್ದೇಶಕರು ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಬಿತ್ತನೆ ಬೀಜ ದಾಸ್ತಾನು ಮಾಡಿರುವ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಮುಖಂಡ ಎ.ನರಸಿಂಹಪ್ಪ ಮಾತನಾಡಿ, ತಾಲೂಕಿನಾದ್ಯಂತ ಅಲ್ಪ ಪ್ರಮಾಣದ ಮಳೆಯಾಗಿದ್ದು ರೈತರು ಜಮೀನನ್ನು ಹದ ಮಾಡಿ ಬಿತ್ತನೆಗೆ ಸಿದ್ಧಗೊಳಿಸಿದ್ದಾರೆ. ಒಂದು ವಾರದಿಂದ ರೈತರು ಅಗತ್ಯ ದಾಖಲೆಗಳನ್ನು ಹಿಡಿದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಬಿತ್ತನೆ ಬೀಜ ನೀಡಬೇಕಾಗಿರುವ ಅಧಿಕಾರಿಗಳು ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳುತ್ತಿದ್ದಾರೆ. ಸರ್ಕಾರ ಸರಬರಾಜು ಮಾಡಿರುವ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಿಕೊಂಡು ರೈತರನ್ನು ಪದೇ ಪದೇ ಅಲೆದಾಡಿಸುತ್ತಿರುವುದು ಯಾವ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.

    ರೈತ ಮುಖಂಡ ಹೊಸಹುಡ್ಯ ಚೌಡಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಬೆಳೆ ಬಿತ್ತನೆಯನ್ನು ಜೂನ್ ತಿಂಗಳಲ್ಲಿ ಮಾಡುವುದು ರೂಢಿಯಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಇದುವರೆಗೂ ಬಿತ್ತನೆ ಬೀಜ ವಿತರಣೆ ಮಾಡದೆ ವಿಳಂಭ ಮಾಡುತ್ತಿದ್ದಾರೆ. 2019 ನೇ ಸಾಲಿನ ಬಿತ್ತನೆ ಬೀಜಗಳನ್ನು ಇದೇ ರೀತಿ ತಡವಾಗಿ ವಿತರಣೆ ಮಾಡಿ ಕೊನೆಗಳಿಗೆಯಲ್ಲಿ ಯಾರಿಗೂ ವಿತರಿಸದೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಂಡ ಪ್ರಸಂಗ ಹಾಗೂ ಪರಿಶಿಷ್ಠ ಜಾತಿ ಮತ್ತು ಪಂಗಡ ಸಮುದಾಯದ ಕೃಷಿಕರಿಗೆ ಉಚಿತವಾಗಿ ಹಂಚಿಕೆ ಮಾಡುವಂತೆ ಇಲಾಖೆಯಿಂದ ನೀಡಲಾಗಿದ್ದ ಟ್ರೈಯಲ್ ಹೈಬ್ರಿಡ್ ತಳಿಯ 100 ಮೂಟೆ ನೆಲಗಡಲೆಯನ್ನು ರೈತರಿಗೆ ಹಂಚಿಕೆ ಮಾಡದೆ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಹಂಚಿಕೊಂಡ ಘಟನೆಗಳು ನಡೆದಿದೆ ಎಂದು ಆರೋಪಿಸಿದರು.

    ಗುರಾಲದಿನ್ನ ರಾಮರೆಡ್ಡಿ, ವೆಂಕಟರೆಡ್ಡಿ, ಸಿಪಿಎಂ ಚನ್ನರಾಯಪ್ಪ, ಕಾರಕೂರು ಮುಸ್ತಫಾ, ಜಿಲಕರಪಲ್ಲಿ ಮಧುಸೂದನ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts