More

    ರೈತರ ‘ಸ್ವಾವಲಂಬನೆಗೆ’ ಉತ್ಪಾದಕ ಕಂಪನಿ

    ಆಲ್ದೂರು: ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ, ಸವಲತ್ತುಗಳು ಪ್ರಭಾವಿಗಳ ಪಾಲಾಗದಂತೆ ತಡೆದು ಸಾಮಾನ್ಯ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ರೈತರಿಂದಲೇ ಆರಂಭವಾಗಿರುವುದು ರೈತ ಉತ್ಪಾದಕರ ಕಂಪನಿ ಎಂದು ಬೆಂಗಳೂರು ಜಿಕೆವಿಕೆ ಪ್ರೊಫೆಸರ್, ರೈತ ಉತ್ಪಾದಕರ ಸಂಘದ ಸಂಪನ್ಮೂಲ ವ್ಯಕ್ತಿ ಪ್ರಭಾಕರ್ ಇಟ್ಟಗಿ ಹೇಳಿದರು.

    ನಾರಾಯಣಗುರು ಸಮುದಾಯ ಭವನದಲ್ಲಿ ಶನಿವಾರ ರೈತ ಉತ್ಪಾದಕರ ಕಂಪನಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಂಪನಿಗಳ ಪ್ರಭಾವ ಹೆಚ್ಚುತ್ತಿದ್ದಂತೆ ರೈತರ ಬೆಳೆಗೆ ಉತ್ತಮ ಬೆಲೆ ಸಿಗದೆ ಆರ್ಥಿಕವಾಗಿ ಕುಗ್ಗಿಹೋಗುತ್ತಿದ್ದಾರೆ. ಇದನ್ನು ಮನಗಂಡು ಸರ್ಕಾರ ರೈತರ ಅನುಕೂಲಕ್ಕಾಗಿ ಕಂಪನಿ ತೆರೆಯಲು 2013ರಿಂದ ಅವಕಾಶ ಮಾಡಿಕೊಟ್ಟಿದೆ ಎಂದರು.

    ತೋಟಗಾರಿಕಾ ಇಲಾಖೆ ಕಿರಿಯ ಸಹಾಯಕ ನಿರ್ದೇಶಕ ಪೃಥ್ವಿರಾಜ್ ಮಾತನಾಡಿ, ಸಣ್ಣ ಹಾಗೂ ಅತಿಸಣ್ಣ ರೈತ ಉತ್ಪಾದಕರ ಸಂಘಕ್ಕೆ ಚಾಲನೆ ನೀಡಲಾಗಿದ್ದು ಆಲ್ದೂರಿನಲ್ಲಿ ಶಾಖೆ ಪ್ರಾರಂಭವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು ಇದರ ಉದ್ದೇಶವಾಗಿದ್ದು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದು ತಿಳಿಸಿದರು.

    ಉಪಾಧ್ಯಕ್ಷೆ ಚಂಪಾ ಜಗದೀಶ್ ಮಾತನಾಡಿದರು. ನಿರ್ದೇಶಕರಾದ ಈಶ್ವರ್, ನಾರಾಯಣ ಆಚಾರ್ಯ, ರುದ್ರೇಗೌಡ, ಗುರುನಾಥ್, ನಾಗೇಶ್, ಮನು ಪುರ, ಸಿಇಒ ಅಮಿತಾ ರಾಜೀವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts