More

    ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

    ನರಗುಂದ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ರಿಯಾಯಿತಿ ದರದ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ತಿಳಿಸಿದರು.

    ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ದಾಸ್ತಾನಿರುವ ಹಿಂಗಾರು ಹಂಗಾಮಿನ ವಿವಿಧ ಬಿತ್ತನೆ ಬೀಜಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

    ತಾಲೂಕಿನಲ್ಲಿರುವ ಎಲ್ಲ ವರ್ಗದ ರೈತರಿಗೆ ಬಿತ್ತನೆ ಬೀಜಗಳನ್ನು ನರಗುಂದ ಮತ್ತು ಕೊಣ್ಣೂರ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು. ರೈತರ ವಾಸ್ತವಿಕ ಹಿಡುವಳಿ ಅಥವಾ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಬೀಜ ನೀಡಲಾಗುವುದು. ಅ. 9 ಬೀಜ ವಿತರಿಸಲಾಗುವುದು. ಒಬ್ಬ ರೈತರಿಗೆ ಒಂದು ಬೆಳೆಯ 3 ಎಕರೆಗೆ ಮಾತ್ರ ಆಯಾ ಬೀಜ ನೀಡಲಾಗುವುದು. 2 ಎಕರೆ ಜಮೀನಿಗೆ ಬೇರೆ ಬೆಳೆಯ ಬೀಜ ಪಡೆಯಬೇಕಾಗುತ್ತದೆ. ರೈತರು ಬೆಳೆ ವೈವಿಧ್ಯತೆ ರೂಢಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರ ಈ ನಿಯಮ ರೂಪಿಸಿದೆ ಎಂದರು.

    ಸಾಮಾನ್ಯ ರೈತರಿಗೆ ಶೇ.50 ರಷ್ಟು ಸಹಾಯಧನ, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.75 ರಷ್ಟು ಸಹಾಯಧನದಲ್ಲಿ ಬಿತ್ತನೆ ಬೀಜ ನೀಡಲಾಗುವುದು. ಬೀಜ ಪಡೆಯುವಾಗ ರೈತರು ಆಧಾರ್ ಕಾರ್ಡ್ ಹಾಗೂ ಜಮೀನಿನ ದಾಖಲೆ ತರಬೇಕು. ಪ.ಜಾತಿ ಮತ್ತು ಪ.ಪಂಗಡದ ರೈತರು ಈ ದಾಖಲೆಗಳ ಜತೆಗೆ ಆರ್.ಡಿ. ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts