More

    ರಿಪ್ಪನ್‌ಪೇಟೆ: 18ರಂದು ಹಿಂದು ರಾಷ್ಟ್ರ ಜಾಗೃತಿ ಸಭೆ

    ರಿಪ್ಪನ್‌ಪೇಟೆ: ಹಿಂದು ರಾಷ್ಟ್ರದ ಅಗತ್ಯತೆ ಪ್ರಚುರಪಡಿಸುವ ಉದ್ದೇಶದಿಂದ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಡಿ.18ರಂದು ಸಂಜೆ 5ಕ್ಕೆ ಪಟ್ಟಣದ ಸಾಗರ ರಸ್ತೆಯ ಶ್ರೀರಾಮ ಮಂದಿರದಲ್ಲಿ ಹಿಂದು ರಾಷ್ಟ್ರ ಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದು ಸಮಿತಿ ಪ್ರಮುಖ ವಿಜಯ ರೇವಣಕರ್ ತಿಳಿಸಿದರು.
    ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಿಂದ ಮಕ್ಕಳಿಗೆ ಧರ್ಮಸಂಸ್ಕಾರ ಸಿಗುತ್ತಿತ್ತು. ಲಾರ್ಡ್ ಮೆಕಾಲೆ ಭಾರತಕ್ಕೆ ಬಂದ ಮೇಲೆ ಗುರುಕುಲ ಶಿಕ್ಷಣ ನಾಶವಾಗಿ ಕಾನ್ವೆಂಟ್ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದ ಪರಿಣಾಮ ಮಕ್ಕಳು ಉಡುಗೆ-ತೊಡುಗೆ, ಆಚಾರ-ವಿಚಾರಗಳಲ್ಲಿ ಪಾಶ್ಚಿಮಾತ್ಯರ ಕಡೆ ಆಸಕ್ತಿ ವಹಿಸಿದ್ದಾರೆ ಎಂದರು.
    ಶೇ.75ರಷ್ಟು ಹಿಂದುಗಳಿರುವ ದೇಶದಲ್ಲಿಯೇ ಹಿಂದುಗಳ ಜಾಗೃತಿಯ ದುಸ್ಥಿತಿ ಬಂದಿದೆ. ಶಾರೀರಿಕ, ಬೌದ್ಧಿಕ, ಮಾನಸಿಕ ಬಲಗಳ ಜತೆಗೆ ಧಾರ್ಮಿಕ ಬಲ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಿದೆ. ಇದನ್ನು ಛತ್ರಪತಿ ಶಿವಾಜಿ ಮಹಾರಾಜರು ಸಾಧಿಸಿ ತೋರಿಸಿದ್ದಾರೆ. ನಾವು ಉದ್ದೇಶಿಸಿರುವುದು ಧರ್ಮ ಸಂಸ್ಥಾಪನಾ ಕಾರ್ಯ. ಸಂಘ ಭಾವದಿಂದ ಮುನ್ನೆಡೆದರೆ ಯಶಸ್ಸು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts