More

    ರಾಷ್ಟ್ರಮಟ್ಟಕ್ಕೆ ಅಗ್ರೀ ರೋಬೋ ಆಯ್ಕೆ

    ಭಟ್ಕಳ: ಮಂಡ್ಯದ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ 14 ಮತ್ತು 15ರಂದು ಜರುಗಿದ ರಾಜ್ಯಮಟ್ಟದ ಇನ್​ಸ್ಪೈರ್​ಅವಾರ್ಡ್ ಸ್ಪರ್ಧೆಯಲ್ಲಿ ತಾಲೂಕಿನ ಮುರ್ಡೆಶ್ವರದ ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ತಯಾರಿಸಿದ ಅಗ್ರೀ ರೋಬೋ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ನಿಸರ್ಗದ ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ ಮೂಲಕ ಈ ರೋಬೋ ಕಾರ್ಯನಿರ್ವಹಿಸುತ್ತದೆ. ಇದನ್ನು ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾಗಿದೆ. ರೋಬೋ ಹೊಲವನ್ನು ಉಳುವ, ನೀರು ಹಾಯಿಸುವ ಹಾಗೂ ಬೀಜ ಬಿತ್ತುವ ಕೆಲಸವನ್ನು ಒಟ್ಟಿಗೆ ನಿರ್ವಹಿಸುವ ಮೂಲಕ ರೈತರ ಸಮಯ ಉಳಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts