More

    ರಾಮಾಯಣ ವೇಷಧಾರಿಗಳಿಗೆ ದ್ವಿತೀಯ ಸ್ಥಾನ

    ತಾಳಿಕೋಟೆ: ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ಅವಿಸ್ಮರಣೀಯ ಸಂದರ್ಭದಲ್ಲಿ ತಾಳಿಕೋಟೆ ಪಟ್ಟಣದ ಸಮಸ್ತ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಖಾಸ್ಗತೇಶ್ವರ ಮಠದಲ್ಲಿ ಛದ್ಮವೇಷಧಾರಿಗಳ ಸ್ಪರ್ಧೆ ಆಯೋಜಿಸಲಾಗಿತ್ತು.

    ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಂತ ವೇಷಧಾರಿಗಳಾಗಿ ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

    ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರೌಢಶಾಲೆಯ ಗೌತಮ ಬದಾಮಿ, ದಕ್ಷೆ ನವಲೆ, ಶ್ರಾವಣಿ ಪೋಲಿಸ್‌ಪಾಟೀಲ, ಪ್ರಜ್ವಲ್ ಕುರಲೆ, ಅಮೀತಾ ನವಲೆ, ಕುಶಾಲ ಕುಂಬಾರ, ಸಂಗಮೇಶ ಕಮತಗಿ, ಶ್ರೀನಿವಾಸ ಚಿರಕನಹಳ್ಳಿ, ಕನಕ ಕನ್ನಡ ಮಾಧ್ಯಮ ಶಾಲೆಯ ಶಿವರಾಜ ಕೊಲಕಾರ, ಯುವರಾಜ ರಾಠೋಡ, ಪ್ರಜ್ವಲ್ ಹೂಗಾರ, ಶ್ರದ್ಧಾ ಯಾಳಗಿ ಭಾಗವಹಿಸಿದ್ದರು.

    ವಿದ್ಯಾರ್ಥಿಗಳ ಸಾಧನೆಗೆ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ.ಸಜ್ಜನ ಹಾಗೂ ಆಡಳಿತಾಧಿಕಾರಿ ಬಿ.ಜಿ.ಸಜ್ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts