More

    ರಾಮನಾಮ ಜಪದೊಂದಿಗೆ ಜಯಘೋಷ

    ಕೋಲಾರ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಬುಧವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ತಾರಕ ಹೋಮದೊಂದಿಗೆ ರಾಮನಾಮ ಜಪ, ಜಯಘೋಷ ಮೊಳಗಿತು.
    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಕೀಲುಕೋಟೆ ಆಂಜನೇಯ ದೇವಾಲಯದಲ್ಲಿ ಬಜರಂಗ ದಳದಿಂದ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರಲ್ಲದೆ ಲಾಡು ಹಂಚಿ ಸಂಭ್ರಮಿಸಿದರು.

    ಹಿಂದುಪರ ಹೋರಾಟದ ವೇಳೆ ಗಲಭೆಯಲ್ಲಿ ಪ್ರಾಣ ತೆತ್ತವರ ಕುಟುಂಬದ ಸದಸ್ಯರಾದ ಕಿಲಾರಿಪೇಟೆ ವೆಂಕಟೇಶಪ್ಪ ಅವರ ಪತ್ನಿ ಮುನಿವೆಂಕಟಮ್ಮ, ಕೃಷ್ಣಪ್ಪ ಪತ್ನಿ ಪುಟ್ಟಮ್ಮ, ಸೀತಾರಾಮಯ್ಯ ಅವರ ಸಹೋದರಿ ಸೀತಮ್ಮ, ದೇವಾಂಗಪೇಟೆಯ ವೆಂಕಟೇಶ ನಾಗರತ್ನಮ್ಮ, ಕೊಂಡರಾಜನಹಳ್ಳಿ ಜಿ.ವೆಂಕಟರಾಂ ಪುತ್ರ ಅಮರನಾಥ ಅವರನ್ನು ಸನ್ಮಾನಿಸಲಾಯಿತು. ಬಜರಂಗದಳದ ಮುಖಂಡ ಬಾಲಾಜಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಕನಸು ನನಸಾಗುವ ಮೂಲಕ ಕರಸೇವಕರ ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದರು.

    ಜಿಲ್ಲಾ ಸಂಚಾಲಕ ಬಾಬು, ಮುಖಂಡರಾದ ಡಿ.ಆರ್. ನಾಗರಾಜ್, ಬಿಜೆಪಿಯ ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಅರುಣಮ್ಮ, ನಗರ ಉಪಾಧ್ಯಕ್ಷೆ ಹೇಮಾ, ಮುಖಂಡರಾದ ಮಂಜು, ಲಕ್ಷ್ಮಮ್ಮ, ವಿಶ್ವನಾಥ್, ಭವಾನಿ, ಶ್ರೀಧರ್, ಹಾರೋಹಳ್ಳಿ ನಾರಾಯಣಸ್ವಾಮಿ, ಪವನ್ ಕುಮಾರ್, ಜೀವನ್‌ರಾಜ್ ಇತರರು ಪಾಲ್ಗೊಂಡಿದ್ದರು. ಅನೇಕರು ಮನೆ ಮೇಲೆ ಭಗವಾಧ್ವಜ ಹಾರಿಸಿ ದೀಪ ಬೆಳಗಿದರು.

    ಶ್ರೀರಾಮ ತಾರಕ ಹೋಮ: ನಗರದ ಕೆಇಬಿ ಗಣಪತಿ ದೇವಾಲಯದಲ್ಲಿ ವಿಹಿಂಪ ಕಾರ್ಯಾಧ್ಯಕ್ಷ ಡಾ.ಸಿ.ಕೆ.ಶಿವಣ್ಣ ದಂಪತಿ ನೇತೃತ್ವದಲ್ಲಿ ಶ್ರೀರಾಮನಾಮ ತಾರಕ ಹೋಮ, ವಿನಾಯಕನಿಗೆ ಅಭಿಷೇಕ ನಡೆಸಲಾಯಿತು. ಆರ್‌ಎಸ್‌ಎಸ್ ಮುಖಂಡ ಡಾ.ಶಂಕರ್ ನಾಯಕ್, ಮಂಜುಳಾ ಭೀಮರಾವ್, ಶಿಳ್ಳೆಂಗೆರೆ ಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.

    ನಗರದ ಬಸ್ ನಿಲ್ದಾಣ ಸಮೀಪದ ಶ್ರೀರಾಮದೇವರಗುಡಿ ಬೀದಿ ದೇವಾಲಯದಲ್ಲಿ ಬಿಜೆಪಿ ಮುಖಂಡ ಜಯಂತಿಲಾಲ್ ನೇತೃತ್ವದಲ್ಲಿ ವಿಶೇಷ ಪೂಜೆ, ಲಡ್ಡು ವಿತರಣೆ ನಡೆಯಿತು. ನಗರಸಭೆ ಮಾಜಿ ಸದಸ್ಯೆ ರತ್ನಮ್ಮ, ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡ ಜೈಶಂಕರ್, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ದಿಲೀಪ್, ಲಾಲ್‌ಚಂದ್, ರಾಜೇಶ್‌ಕುಮಾರ್, ಜಿತೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಟೇಕಲ್ ರಸ್ತೆಯ ಸಪಲಮ್ಮ ದೇವಾಲಯ ಸಮೀಪ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ನೇತೃತ್ವದಲ್ಲಿ ಯುವಕರು ಶ್ರೀರಾಮನ ಕಟೌಟ್ ನಿಲ್ಲಿಸಿ ಪೂಜೆ ಸಲ್ಲಿಸಿ, ಸಿಹಿ ಹಂಚಿದರು.

    ಹಳ್ಳಿಗಳಲ್ಲೂ ಜೈಕಾರ: ಅರಾಭಿಕೊತ್ತನೂರು ಗ್ರಾಮದ ವೃತ್ತದಲ್ಲಿ ಶ್ರೀರಾಮನ ಕಟೌಟ್‌ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಮುಖಂಡರಾದ ವೈ.ಮುನಿಯಪ್ಪ, ನಾರಾಯಣಶೆಟ್ಟಿ ಇತರರಿದ್ದರು. ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರ ನೇತೃತ್ವದಲ್ಲಿ ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಸಂಕೀರ್ತನೆ ನಡೆಸಲಾಯಿತು.

    ಬಿಗಿ ಬಂದೋಬಸ್ತ್: ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಿಸಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಕೆಎಸ್‌ಆರ್‌ಪಿ ತುಕಡಿ ಹಾಗೂ ಬಿಗಿ ಪಹರೆ ನಡೆಸಿದ್ದು, ವಿವಿಧ ವೃತ್ತಗಳಲ್ಲಿ ಪೊಲೀಸರು ಬಂದೋಬಸ್ತ್ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts