More

    ರಾಮತೀರ್ಥ ನಗರ ಪಾಲಿಕೆಗೆ ಹಸ್ತಾಂತರಿಸಲಿ

    ಬೆಳಗಾವಿ: ರಾಮತೀರ್ಥ ನಗರವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ರಾಮತೀರ್ಥ ನಗರ ನಿರ್ಮಾಣಗೊಂಡು ಬರೋಬ್ಬರಿ 20 ವರ್ಷ ಕಳೆಯಿತು. ಇಲ್ಲಿಯವರೆಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳು ಇಲ್ಲ. ಸ್ಥಳೀಯ ನಿವಾಸಿಗಳು ನಿತ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೀದಿ ದೀಪ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಮೇಲಿಂದ ಮೇಲೆ ಬುಡಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಬುಡಾ ನಿರ್ಲಕ್ಷೃದಿಂದಾಗಿ ರಾಮತೀರ್ಥ ನಗರ ಅಭಿವೃದ್ಧಿ ವಂಚಿತವಾಗಿದೆ ಎಂದು ದೂರಿದರು.

    ರಾಮತೀರ್ಥ ನಗರವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುತ್ತಿಲ್ಲ. ಇತ್ತ ನಿವಾಸಿಗಳಿಗೆ ಸೌಲಭ್ಯಗಳನ್ನೂ ಕಲ್ಪಿಸುತ್ತಿಲ್ಲ. ಇದರಿಂದಾಗಿ ಜನರು ಯಾವುದೇ ಸೌಕರ್ಯಗಳು ಇಲ್ಲದೆ ದಿನ ಕಳೆಯುತ್ತಿದ್ದಾರೆ. ಮತ್ತೊಂದೆಡೆ ಪ್ರತಿ ವರ್ಷ ನೀರು, ವಿದ್ಯುತ್ ಸೇರಿ ವಿವಿಧ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುವರಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ರಾಮತೀರ್ಥ ನಗರ ನಿವಾಸಿಗಳ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು.
    ಚೂನಪ್ಪ ಪೂಜಾರಿ, ಶಿವಾನಂದ ಮುಗಳಿಹಾಳ, ರಾಘವೇಂದ್ರ ನಾಯಕ, ಸುರೇಶ ಪರಗನ್ನವರ, ಪ್ರಕಾಶ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts