More

    ರಾಜಕಾರಣಿ ಆಪ್ತರ ವಿಚಾರಣೆಗೆ ಸಿದ್ಧತೆ

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ ಗೌಡ ಕೊಲೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

    ಪ್ರಕರಣ ಸಂಬಂಧ ಸಿಬಿಐ ಈಗಾಗಲೆ ಹಲವು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದೆ. ಈವರೆಗೆ ನಡೆಸಿದ ವಿಚಾರಣೆಯಿಂದ ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತರು ಪ್ರಕರಣದಲ್ಲಿ ಶಾಮೀಲಾಗಿರುವ ಸುಳಿವು ಸಿಕ್ಕಿದೆ. ಈ ಆಧಾರದ ಮೇಲೆ ರಾಜಕಾರಣಿಯ ಆಪ್ತರನ್ನು ಸದ್ಯದಲ್ಲೇ ವಿಚಾರಣೆ ನಡೆಸಲು ಸಿಬಿಐ ಸಿದ್ಧತೆ ನಡೆಸಿದೆ.

    ಕೊಲೆ ರಹಸ್ಯದ ಜಾಡು ಹಿಡಿದು ಹೊರಟಿರುವ ಸಿಬಿಐ ಮಹತ್ವದ ಸಾಕ್ಷ್ಯ ಕಲೆ ಹಾಕಿದ್ದು, ಸದ್ಯದಲ್ಲೇ ಇನ್ನೂ ಕೆಲ ಪೊಲೀಸ್ ಅಧಿಕಾರಿಗಳನ್ನು ಬಳ್ಳಾರಿ ರಸ್ತೆಯಲ್ಲಿರುವ ಸಿಬಿಐ ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸಲು ಮುಂದಾಗಿದೆ. ಈಗಾಗಲೆ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಬಿಐ, ಮುಂದಿನ ತಿಂಗಳೊಳಗೆ ಅಂತಿಮ

    ಚಾರ್ಜ್​ಶೀಟ್ ಸಲ್ಲಿಸಲು ಪ್ರಯತ್ನಿಸುತ್ತಿದೆ. 2ನೇ ಚಾರ್ಜ್​ಶೀಟ್​ನಲ್ಲಿ ಕೊಲೆ ರಹಸ್ಯದ ಹಲವು ಕುತೂಹಲಕಾರಿ ಅಂಶ ಉಲ್ಲೇಖಿಸಲಾಗಿದೆ ಎಂದು ಸಿಬಿಐ ಉನ್ನತ ಮೂಲಗಳು ತಿಳಿಸಿವೆ.

    ಪ್ರಭಾವಿ ವಿಚಾರಣೆ: ಅಗತ್ಯ ಬಿದ್ದರೆ ಪ್ರಭಾವಿ ರಾಜಕಾರಣಿಯನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ರಾಜಕೀಯ ದುರುದ್ದೇಶದಿಂದ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಈ ಎರಡೂ ಆಯಾಮಗಳಲ್ಲಿ ಸಿಬಿಐ ತನಿಖೆ ಮುಂದುವರಿಸಿದ್ದು, ಅಂತಿಮ ಹಂತದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts